Sunday, October 21, 2012

ಅಂತರ್ನಿಹಿತ ಸೌಂದರ್ಯ

 
ಅಂತರ್ನಿಹಿತ ಸೌಂದರ್ಯ
 
ನನ್ನ ಕಣ್ಣ ಸೆಳೆದ ಸೌಂದರ್ಯವೇ
ನಿನ್ನ ಅಂದಕ್ಕೆ ಸರಿ ಸಾಟಿ ಎಲ್ಲಿದೆ
ಯಾವ ತ್ಯಾಗದಿ ಪಡೆಯಲಿ
ನನ್ನೀ ಈ ಜೀವ ಪಣ ಇಟ್ಟು ಬರುವೆ
ನಿನ್ನ ಅಂದಕ್ಕೆ ಇಂದು ಬೇಳುವೆಗೊಂಡೆನೆ
ನನ್ನ ಕಣ್ಣ ಸೆಳೆದ ಸೌಂದರ್ಯವೇ
ಒಂದೇ ಒಂದು ಪದವಾಡಿಸದೆ ಮೌನವಾಗಿಹೆ ..೨

ಆ ಬ್ರಹ್ಮ ನಿನ್ನನು ಸೃಜಿಸುತ
ಮಂಕಾಗಿಹನು ಮೌನವಾಗಿಹನು
ಇವಳ ಅಂದಕ್ಕೆ ನೀನೆ ಮನ್ನಣೆ
ಇಂದು ಇವಳು ಸೆಳೆದಳು ನನ್ನ ಕಣ್ಣನೆ
ನನ್ನ ಕಣ್ಣ ಸೆಳೆದ ಸೌಂದರ್ಯವೇ
ಒಂದೇ ಒಂದು ಪದವಾಡಿಸದೆ ಮೌನವಾಗಿಹೆ ..೨

ಬೇಗ ಬಂದು ನನ್ನೀ ಬದುಕ ಸೇರು
ನಿನ್ನ ಸ್ಪರ್ಶಿಸಲು ಮಾಗಿದೆ ನನ್ನೀ ಬೆರಳು
ಸುಮ್ಮನೆ ಇಲ್ಲಿದೆ ನಿರ್ಜಿವ ನನ್ನೀ ದೇಹ
ನೀ ಬಂದು ಉಸಿರು ನನ್ನೊಳಗೆ ಜೀವ
ನನ್ನ ಕಣ್ಣ ಸೆಳೆದ ಸೌಂದರ್ಯವೇ
ಒಂದೇ ಒಂದು ಪದವಾಡಿಸದೆ ಮೌನವಾಗಿಹೆ ..೨

ಇವಳ ಒಡಲು ಒಂದು ಸುಂದರ ವೀಣೆ
ಇಂದು ಇವಳ ನುಡಿಸುವ ವೈಣಿಕ ನಾನೇ
ಅಂದು ಹೊಯ್ಸಳರು ಕೆತ್ತಿದ ಶಿಲಾಬಾಲಿಕೆ
ಇಂದು ಜೀವ ಬಂದು ನನ್ನ ಮುಂದೆ ನಿಂತಿಹೆ
ಮತ್ಯಾರಿಗು ಹೋಲಿಕೆ ಸಾಧ್ಯವಿಲ್ಲವೇ
ನನ್ನ ಕಣ್ಣ ಸೆಳೆದ ಸೌಂದರ್ಯವೇ
ಒಂದೇ ಒಂದು ಪದವಾಡಿಸದೆ ಮೌನವಾಗಿಹೆ ..೨
~ಸಂಜು ~

No comments:

Post a Comment