Monday, October 8, 2012

ಒಂದಿಷ್ಟು ಹನಿಗಳು


ಒಂದಿಷ್ಟು ಹನಿಗಳು

ಇಂದೇಕೋ ಬೇಸರ
ಬದುಕಲು ತ್ರಾಣವಿಲ್ಲ
ಕ್ಷಣ ಜೀವಿಸುವ ಇಚ್ಛೆ ಇಲ್ಲ
ಬೇಡವೇ ಬೇಡ
ಲೇಖನಿಯ ಆವಾಂತರ
ಬರೆಯಲು ಹೋದರೆ ಅಕ್ಷರ
ಕಣ್ಣೀರಾಗಿ ಹುರುಳುವುದು
ಪದಗಳಲ್ಲ ಒಂದೊಂದು ಹನಿ
ನೆನಪುಗಳ ರಾಶಿ ಹೊತ್ತ ಆಗರ  


 ಸಂಜು

ಬಿಚ್ಚಿದೆ ಗಂಟು

ಕಟ್ಟಿದೆ ಅಟ್ಟದಮೆಲೊಂದು ಗಂಟು
ಮರೆತು ಹೋಗಿತ್ತು ಕಾಲದ ಹೊಡೆತಕ್ಕೆ
ಇಂದು ಏನೋ ನೆನಪಾಗಿ ಬಿಚ್ಚಿ ನೋಡಿದಕ್ಕೆ
.
.
.
.
.
....
.
.
.
.
.
.
.
.
ನನ್ನೆಲ್ಲ ಭಾವನೆಗಳ ಗೊಂಚಲು ಅಲಿತ್ತು
ಕಣ್ಣೊರೆಸಿ ಒಂದೊಂದೇ ಕೆದಕುತ್ತ ಕುಳಿತೆ
ನಿಮ್ಮ ಮುಂದೆ ಕವನಗಳಾಗಿ ಬಿತ್ತರಿಸಿದೆ
ಒಂದಿಷ್ಟು ಸಿಹಿ ಒಂದಿಷ್ಟು ಕಹಿ
ಎಲ್ಲದಕ್ಕು ನನದೆ ಇತ್ತು ಸಹಿ

 ಸಂಜು


ಮೂಕ ಮನಸಿನ ಮೌನ ರಾಗ
******************************
ಅವಳಿಗೆ ಪ್ರೀತಿ ಭಾವ ಹೊರ ತರಲು ಬರಲಿಲ್ಲ
ನನಗೆ ಅವಳ ಪ್ರೀತಿಸುವುದು ಬಿಟ್ಟು ಬೇರೆ ತಿಳಿದಿರಲಿಲ್ಲ
ನಾ ವಿವರಿಸಲು ಹೋದ ನನ್ನ ಭಾವ ಅರ್ಥವಾಗಲು ಇಲ್ಲ
ನನ್ನ ಪ್ರೀತಿ ಭಾವ ಬಿತ್ತರಿಸುವ ದಾರಿ ತಿಳಿಯದೆ
ಇಂದು ಕವನವಾಗಿ ಹರಿದಿದೆ ದಿಕ್ಕು ದಾರಿ ಇಲ್ಲದೆ
 ಸಂಜು

ಮೂಕ ಮನದ ಮೌನ ರಾಗ
***********************
ನನ್ನ ಒಂಟಿತನದ ಮೇಲೆ ಪ್ರೀತಿ ಹುಟ್ಟಿದೆ
ನಿನ್ನ ನೆನೆಪಿನಾಳದಲ್ಲಿ ಮುಳಗಲು
ನನ್ನ ನಿನ್ನ ಹತ್ತಿರ ತರುತ್ತದೆ
ನನ್ನ ಕನಸಿನ ಮೇಲೆ ಮೋಹ ಹುಟ್ಟಿದೆ
ನಿನ್ನ ಸುಂದರ ಮುಖಾರವಿಂಧವ
ನನಗೆ ಸದಾ ತೋರುತ್ತದೆ
ಪ್ರೀತಿಸುತ್ತಿರುವೆ ಕಳೆದ ಎಲ್ಲ ರಾತ್ರಿಗಳ
ನಿನ್ನ ಭ್ರಮೆಯ ಕಲ್ಪಿಸಿಟ್ಟ ನೆನಪುಗಳ
ಪ್ರೀತಿಸುತ್ತಿರುವೆ ಆ ಎಲ್ಲ ಪ್ರೆಶ್ನೆಗಳ
ನೀನೆ ಉತ್ತರವಾಗಿ ನಿಂತ ಶಬ್ಧಗಳ
ಪ್ರೀತಿಸುತ್ತಿರುವೆ ಈ ನನ್ನ ಹೃದಯವ
ನಿನಗೆಂದೇ ಸದಾ ಮಿಡಿಯುವ ಬಡಿತಗಳ
ಪ್ರೀತಿಸುತ್ತಿರುವೆ ನನ್ನ ಪ್ರತಿ ಉಸಿರನ್ನು
ನಿನ್ನ ಹೆಸರನ್ನೇ ತುಂಬಿಕೊಂಡಿರುವ ಶ್ವಾಸಗಳ

ಸಂಜು

ಮೂಕ ಮನದ ಮೌನ ರಾಗ
********************
ನನ್ನ ಎದೆಯಿಂದ ನಿನ್ನ ದೊರವಾಗಲು ಬಿಡುವುದಿಲ್ಲ
ನಿನಗೆ ನಿದಿರೆ ಬಂದರು ಮಲಗಲು ಬಿಡುವುದಿಲ್ಲ
ನಿನ್ನ ಪ್ರೀತಿ ನನಗೆ ಎಷ್ಟೊಂದು ಪ್ರಿಯ ಅಂದರೆ
ಒಂದು ಕ್ಷಣ ನಿನ್ನ ಅಗಲಿರಲು ಆಗುವುದಿಲ್ಲ
ನಿನ್ನ ನಗು ನನಗೆ ಎಷ್ಟೊಂದು ಮುಖ್ಯ ಅಂದರೆ
ನಾ ಸತ್ತರು ನಿನ್ನ ಆಳುವುದಕ್ಕೆ ಬಿಡುವುದಿಲ್ಲ 

 ಸಂಜು


ನಿದ್ರೆಗು ನಿನ್ನ ಚಾಳಿ ಹಿಡಿದುಬಿಟ್ಟಿದೆ ಗೆಳತಿ
ನಿರ್ಧಯಿ ಇಡಿ ರಾತ್ರಿ ಬರುವುದಿಲ್ಲ 

 ಸಂಜು


ಒಬ್ಬರ ಕನಸು ಇನ್ನೊಬ್ಬರ ಅಪೇಕ್ಷೆಯಾಗಬಹುದು
ಒಬ್ಬರ ನಗು ಇನ್ನೊಬ್ಬರ ಮುಗುಳುನಗೆ ಆಗಬಹುದು
ಇವೆಲ್ಲವನ್ನು ಒಂದೇ ಮಾತಿನಲ್ಲಿ ಪ್ರೀತಿ ಎನ್ನಬಹುದು
ಒಬ್ಬರ ಉಸಿರು ಇನ್ನೊಬ್ಬರ ಜಿವವಾದರೆ ...? 

 ಸಂಜು


ಬದುಕು ಬವಣೆಯಾಗಿತ್ತು ಒಪ್ಪಿಕೊಂಡೆ
ಪ್ರವಾಹದಂತೆ ಬರುತಿದ್ದ ಕಷ್ಟಗಳನ್ನು ತಡೆದುಕೊಂಡೆ
ನೀನೊಬ್ಬಳು ನನ್ನೊಂದಿಗೆ ಇರು ಯಾವಾಗಲು
ಒತ್ತರಿಸಿ ದುಮುಕುವ ದುಖಃದಲ್ಲು ನಗುತ್ತಿರುವೆ   

 ಸಂಜು


ಒಂಥರದ ಗೊಂದಲವಾಗಿತ್ತು
ಪ್ರಾಣಕ್ಕಿಂತ ಹೆಚ್ಚಾಗಿ ಪ್ರಿತಿಸಿದವಳು ಮತ್ತು
ನನ್ನ ಸಾವು ಎರೆಡು ಒಟ್ಟಿಗೆ ಬಂದ ಅ ಹೊತ್ತು 

 ಸಂಜು

 
ನನ್ನುಸಿರಿನ ಸ ರಿ ಗ ಮ ಕ್ಕೆ ನಿನ್ನ ನೆನಪಾಗುತಿದೆ
ತಣ್ಣನೆ ಬೀಸುವ ಗಾಳಿಯು ನಿನ್ನದೇ ಮಾತಾಡುತಿದೆ
ಮನದಲಿ ಸಾವಿರ ಭಾವಗಳು ನನ್ನ ಕೆಣಕುತಿದೆ
ನಿನ್ನ ಸೇರಲು ಮನ ಅಲೆಯುತಿದೆ
ನಿನ್ನ ಕಾಣಲು ಕಣ್ಣಿಗೆ ಕಾತರಿಕೆಯಿದೆ
ರಾತ್ರಿ ಚಂದ್ರನ ಹಿಂಬಾಲಿಸುತಿದೆ

ಸಂಜು


ರಾತ್ರಿ ಕೇಳದು ಹೋಗುವುದು
**************************
ನಿನ್ನ ನೆನಪಿನಲ್ಲೇ ರಾತ್ರಿ ಕಳೆದು ಹೋಗುವುದು
ನಿಸ್ಸಹಾಯಕತೆಯ ಗುಂಗಿನಲ್ಲೇ ಇಡಿ ರಾತ್ರಿ ಕಳೆದು ಹೋಗುವುದು
ನೀನು ನನ್ನ ನೆನಪಿಸಿಕೊಳ್ಳುವೆಯೋ ಇಲ್ಲವೋ
ಈ ಪ್ರೆಶ್ನೆಯಲ್ಲೇ ರಾತ್ರಿ ಕಳೆದು ಹೋಗುವುದು
ನಿನ್ನ ಮುಖಾರವಿಂಧವ ಬಣ್ಣಿಸುತ್ತಾ
ನಿನ್ನ ಭಾವಚಿತ್ರ ಹೊರೆಸುತ್ತ ಇಡಿ ರಾತ್ರಿ ಕಳೆದು ಹೋಗುವುದು
ನಿನನ್ನು ಚಂದ್ರನೆನ್ನಲೇ ಚಂದ್ರನ ಬಿಂಬವೆನಲ್ಲೇ
ಈ ಯೋಚನೆಯ ಸುಳಿಯಲ್ಲಿ ರಾತ್ರಿ ಕಳೆದು ಹೋಗುವುದು
ನೀನು ನನ್ನೊಂದಿಗೆ ಇರಬಾರದಿತ್ತೆ ಪ್ರತಿ ಕ್ಷಣ
ಈ ಆಸೆಯ ಅಮಲಿನಲ್ಲಿ ಇಡಿ ರಾತ್ರಿ ಕಳೆದು ಹೋಗುವುದು
ಅದೃಷ್ಟವಿಲ್ಲದೆ ಈ ಜಗತ್ತಿನಲ್ಲಿ ಏನೇನು ಸಿಗದು
ಈ ದುಖಃದಲ್ಲೇ ನನ್ನ ಪ್ರತಿ ರಾತ್ರಿ ಕಳೆದು ಹೋಗುವುದು

ಸಂಜು


ಒಂದೇ ಒಂದು ಕ್ಷಣ
******************
ನನ್ನೀ ಎದೆಮನೆಗೆ ಬಂದು ಹೋಗು ಒಂದು ಕ್ಷಣ
ನಿನ್ನಾಸೆಯಿಂದ ಅಲಂಕರಿಸು ಈ ನನ್ನ ಮನ
ಆಗಲೇ ಅಲ್ಲೇ ಶ್ರುಷ್ಠಿಸುವೆ ಸ್ವರ್ಗ ಆ ಒಂದು ಕ್ಷಣ
ಈ ಬಡವನ ಮನೆಗೆ ನೀ ಬಂದ ಆ ಸುದಿನ
ಎಲ್ಲೋ ಕಳೆದು ಹೋಗುವ ನಾವು ಆ ಒಂದು ಕ್ಷಣ
ಹೃದಯದ ಹಣತೆ ಹಚ್ಚಿ ಬದುಕುವ ಪ್ರತಿ ದಿನ
ಈ ಆಸೆಯಲ್ಲೇ ಬಂದಿಯಾಗಿ ಸೊರಗುತ್ತಿರುವೆ ಪ್ರತಿ ಕ್ಷಣ
ಈ ಸರಪಳಿಗಳಿಂದ ಬಿಡಿಸಿ ಸ್ವತಂತ್ರಗೊಳಿಸು ನೀ ಒಂದು ಕ್ಷಣ
ಚಡಪಡಿಸುತ್ತಿರುವುದು ಒಂಟಿಯಾಗಿ ನನ್ನೊಡಲ ಕಣ ಕಣ
ನೀ ಬಂದು ಆಲಂಗಿಸು ತ್ರಾಣ ಉಳಿಸು ಆ ಒಂದು ಕ್ಷಣ
ನೀ ನನ್ನೊಲವು ನೀ ನನ್ನವಳು ಜಪಿಸುತ್ತಿರುವೆ ಪ್ರತಿ ದಿನ
ನನ್ನ ಪ್ರಿಯಕರನಾಗಿಸು ನಿನ್ನ ಬದುಕಿಗೆ ಒಂದೇ ಒಂದು ಕ್ಷಣ

ಸಂಜು


ಆಗ ನಿನ್ನ ಗುಂಗಲ್ಲೇ ಇರುತಿದ್ದೆ ನಾನು
ಶಾಂತಿ ನೆಮ್ಮದಿಯಿಂದ ಇತ್ತು ಬಾಳು
ಇರುತಿತ್ತು ಕಣ್ಣಿನಲ್ಲಿ ಹೊಸ ಹೊಳಪೊಂದು
ಒಳಗೊಳಗೆ ನಿನ್ನಾಸೆಯ ಬಿರುಗಾಳಿ ಬೀಸುತಿತ್ತು

ಕವನ ಬರೆಯಲು ಲೇಖನಿ ಹಿಡಿದರೆ ಸಾಕು
ನಿನ ಹೆಸರೇ ಬರೆಯುತಿದ್ದೆ ಮೊದಲು
ಕವನ ಕೇಳಲು ಬರುವ ಅಭಿಮಾನಿಗಳಿಗೆ
ನಿನ ಬಗ್ಗೆ ಮಾತಾಡಿ ಕಳುಹಿಸುತಿದ್ದೆ

ನಿರ್ಜನ ಪ್ರದೇಶದಲ್ಲಿ ಸೇರುತಿದ್ದರೆ ನಾವು
ದಾರಿ ಉದಕ್ಕು ಆರಳುತಿತ್ತು ಹೊಸ ಹೂವು
ಕನ್ನಡಿ ಹೊರೆಸುವ ನೆಪದಲ್ಲಿ
ನಿನ್ನ ಹೆಸರ ಬರೆದು ಅಳಿಸುತಿದ್ದೆ ಕುಶಿಯಲಿ

ಬಳ್ಳಿಯಲ್ಲಿ ಹೊವಿಗೊಂದು ದುಂಬಿ ಬಂದು ಕೆಣಕಲು
ನಿನ್ನಾಟ ನೋಡುತಿದ್ದೆ ನಿನ್ನ ಮುಂಗುರುಳಿನೊಂದಿಗೆ
ಕಣ್ಣ ರೆಪ್ಪೆ ಸೆಣಸಲು

ಸಂಜು

ನಿಲ್ಲಿಸಲಾಗುತ್ತಿಲ್ಲ ಈ ಕಣ್ಣಿರು
ಇಂದು ನಿನ್ನ ಮನಬಂದಂತೆ ಹರಿದು ಬಿಡು
ನಾ ಒಂಟಿಯಾಗಿ ಇದ್ದೆ
ನನ್ನ ಒಂಟಿತನಕ್ಕೆ ಜೊತೆ ನಿಂದೆ
ಅವಳ ಪ್ರೀತಿಸಿ ನಾ ಪಡೆದಿಹೆ
ಈ ಬಹುಮಾನ ಇಂದು
ನಿನಗೂ ಉಪ್ಪಿಗೂ ಅದುಹೇಗೆ ನಂಟೋ
ಅದೇ ನಂಟು ನನ್ನ ಹೃದಯದೊಳಗುಂಟು
ನಾ ಅವಳ ಪ್ರೀತಿಗೆ ಹುಚ್ಚನಾದರೆ
ಕರೆಯಲಿ ಬಿಡು ನನ್ನ ಹುಚ್ಚನೆಂದು

ಸಂಜು

ನಿನ್ನ ಸುಂದರ ಚಿತ್ರ ನನ್ನ ಕಣ್ಣಿನಲಿ ಇಂದು ಇದೆ
ಹೃದಯದ ಮೇಲೆ ಬರೆದ ಪ್ರತಿ ಪ್ರೀತಿ ಬರಹ ಮಾಸದೆ ಇನ್ನು ಇದೆ
ನೀ ಬಿಟ್ಟೋದ ಕ್ಷಣ, ಕುಶಿ ನೆಮ್ಮದಿ ನನ್ನ ತೊರೆಯಿತು
ನನ್ನ ಅದೃಷ್ಟವು ನನ್ನ ಬಿಟ್ಟು ದೂರ ಸರಿಯಿತು
ದುಖಃ, ನೋವು, ನೆನಪು, ಒಂಟಿತನ
ನೀ ಬಿಟ್ಟು ಹೋದ ಈ ಸಂಪತ್ತು ನನಲ್ಲಿ ಇನ್ನು ಇದೆ
ಈ ಪ್ರೇಮಿ ನಿನ್ನ ಪ್ರೀತಿ ಉಳಿಸಿಕೊಳ್ಳಲು ಆಗದವನು
ಆದೆ ಬೈಗೆ ಬೆಂಕಿಯಲ್ಲಿ ಬೇಯುತ್ತಿರುವ ಹೃದಯ ಇಂದು ಇದೆ
ನೀನು ಬದಲಾದೆ ಅದರೆನಾಯಿತು
ನನ್ನ ಅಸ್ತದಲ್ಲಿ ಬರೆದಿರುವ ನಿನ್ನ ಹೆಸರ ರೇಖೆ ಇನ್ನು ಹಾಗೆ ಇದೆ

ಸಂಜು
ಸಮಯ ಉರುಳಿದಂತೆ ಎಲ್ಲವನು ಮರೆತು ಬಿಡುತ್ತಾರೆ
ಕಾರಣವಿಲ್ಲದೆ ನಮ್ಮನು ಅಳಿಸಿ ಹೋಗಿ ಬಿಡುತ್ತಾರೆ
ಯಾವ ದೀಪ ರಾತ್ರಿ ಇಡಿ ತಾನುರಿದು ಬೆಳಕ ನೀಡಿತ್ತೋ
ಎಲ್ಲರು ಬೆಳಗಾದಂತೆ ಅದನ್ನು ನಂದಿಸಿ ಬಿಡುತ್ತಾರೆ
ಸಂಜು

ಪ್ರೇಮಿಗಳು ಕಣ್ಣಿನ ಬಾಷೆ ಅರಿತಿವರು
ಕನಸಿನಲ್ಲೇ ನಡೆದ ವಿಹಾರವನ್ನು
ನಿಜವೆಂದುಕೊಂಡವರು
ಭೂಮಿ, ಆಗಸವು ಪ್ರೇಮಿಗಳೇ
ತನ್ನವಳ ಆಗಲಿಕೆಯಿಂದ
ಆಗಾಗ ಅತ್ತರೆ
ಎಲ್ಲರು ಮಳೆಯೆಂದುಕೊಂಡು
ಸಡಗರ ಪಟ್ಟು ನಲಿಯುವರು

ಸಂಜು

ನನ್ನ ಪ್ರತಿ ಕ್ಷಣ ನಿನ್ನೊಂದಿಗೆ ಶುರುವಾಗಿ ನಿನ್ನೊಂದಿಗೆ ಮುಗಿಯುವುದು
ಹೃದಯ ಸದಾ ನಿನ್ನ ನೆನಪಿನಲ್ಲಿ ಇರಲ್ಲಿಚ್ಚಿಸುವುದು
ನನ್ನೆಲ್ಲಾ ಪ್ರೀತಿ ಕಣ ಕಣ ಅರಿತು ಕುಡಿದವಳೇ
ಇಂದೇಕೆ ಮೌನವಾಗಿ ನನ್ನ ಕೊಲ್ಲುತಿಹಳು

ಸಂಜು
 
ನಮ್ಮ ಕನಸುಗಳ ಹೆಣೆದ ಅ ಸುಂದರ ಕಲ್ಪನೆಗೆ ಶರಣು
ಅರ್ದಕ್ಕೆ ನಿಲ್ಲಿಸಿದ ಅ ಹೆಣೆಗಾರಳು ನೀನು
ಬಾಳಿನುದಕ್ಕು ಜೊತೆ ಇರುವೆ ಎಂದವಳು
ತಿಳಿಯಲೇ ಇಲ್ಲ ಏಕೆ ವಿದಾಯ ಹೇಳಿದಳು
ಅರ್ಥವಾಗದ ನಿನ್ನ ಈ ವಿದಾಯ
ಕೇಳುವ ಅವಕಾಶ ಕೂಡ ಕೊಡಲಿಲ್ಲ ನೀನು
ಅಷ್ಟೊಂದು ಸುಲಭದ ಕೆಲಸವ ನಿನಗೆ
ಒಂಟಿಯಾಗಿಸುವುದು
ಬಿಟ್ಟೋದ ಜಾಗಗಲ್ಲಿ ಒಮ್ಮೆ ತಿರುಗಿ ನೋಡು
ನನ್ನ ಒಂಟಿತನದ ನೆರಳು
ಅಲ್ಲಲ್ಲಿ ಹೆಣವಾಗಿ ಮಲಗಿರುವುದು

ಸಂಜು
ನಿನ್ನೀ ಮುನಿಸಿನಲ್ಲಿ ಯಾವ ಸುಖವಿಲ್ಲ
ನೀನಿಲ್ಲದೆ ನನ್ನೆದೆಯ ದೀಪದಲ್ಲೂ ಬೆಳಕಿಲ್ಲ
ಹೇಗೆ ಹಾಡಲಿ ನನ್ನೆದೆಯ ಈ ಆಲಾಪ
ತಂತಿ ಮೀಟುವ ಕೈ ಇದೆ ರಾಗವಾಗುವ
ನೀನಿಲ್ಲದೆ ಅ ಭಾವ ಹೊರಡುತ್ತಿಲ್ಲ
ಬದುಕಿನುದಕ್ಕು ನಿನ್ನ ಬಿಟ್ಟು ಬೇರೆ
ಚಿಂತಿಸಿಲ್ಲ
ಜೀವವಿದೆ ಆದರೆ ಜೀವದಲ್ಲಿ ನೀನಿಲ್ಲದೆ
ಬದುಕಿಲ್ಲ
ಸಂಜು
 
ಓ ದೇವ ಇಂದು ನಿನ್ನ ನಿರ್ಧಾರ ತಿಳಿಸು
ನನ್ನ ಅವಳಿಗೆ ಇಲ್ಲ ಅವಳ ನನ್ನದಾಗಿಸು
ಬಹಳ ನೊಂದಿದಂತಹ ಹೃದಯ
ಇಂದು ಈ ಒಂದು ಕುಶಿ ಕರುಣಿಸು
ಬಹಳ ಕಷ್ಟವಾಗಿದೆ ಈ ದೂರದ ದೂರ
ಇ ಆಗಲಿಕೆಯ ಪಯಣದ ದೂರ ಕಮ್ಮಿಯಾಗಿಸು
ಎಷ್ಟು ದೂರಗಳ ಈ ದೂರ ತಾಳಲಾರೆ
ಅವಳ ನನ್ನ ಅತ್ತಿರವಾಗಿಸು
ನಮ್ಮ ಒಲವ ಆಳ ತಿಳಿದವನು ನೀನು
ನಮ್ಮಿಬ್ಬರ ಈ ಮೊರೆ ಆಲಿಸು
 
ಮಿಲನಕ್ಕೆ ಒಂದು ದಾರಿ ತೋರಿಸು
ನಿ ಕೊಟ್ಟ ಒಲವೆ ಇದು
ಈ ಹೃದಯಗಳ ರೋಧನೆ ನಿಲ್ಲಿಸು
ನಮಗೆ ಅ ಮಿಲನದ ಸುಧೆಯ ವರವಾಗಿಸು

ಸಂಜು

ನೀನು, ನಾನು
ಅಂತರ
ಭೂಮಿ , ಬಾನು
ತಾನು
ಮಿಲನದ
ನಂತರ
ನೀನು ಎಲ್ಲಿದ್ದರೇನು
ಪ್ರೀತಿ ಪಾತ್ರ
ಹೊನ್ನು

ಸಂಜು

ಈ ತುಂತುರು ಋತು ರಮಣೀಯ
ಸುಯ್ಯನೆ ಬೀಸುವ ತಣ್ಣನೆ ಗಾಳಿಯ
ಭಾವನೆಗಳ ಚಿಟ ಪಟ ಅರ್ಭಟ
ಸನ್ನೆಯಲೇ ನಿನಗೆ ತಿಳಿಸದೇ
ನಿನ್ನ ನೆನಪಿನಲ್ಲಿ ನನ್ನ ಎದೆ ಕೂಗಿದೆ

ಸಂಜು

ನಿನ್ನ ಮೇಲಿನ ಪ್ರೀತಿಗೆ
ನಿನ್ನ ಕನಸುಗಳ ಕಾಪಾಡಿದೆ
ನಿನಗಾಗಿ ನನ್ನವರೊಂದಿಗೆ
ಸೆಣೆಸಾಡಿದೆ
ನಿನ್ನ ಮುಗ್ದ ಕಣ್ಣುಗಳ ಆಣೆ
ಹೃದಯವಂತು ಧಾರೆ
ಎರೆದಾಗಿದೆ
ನನ್ನ ಆತ್ಮವು ನಿನ್ನೊಂದಿಗೆ
ಸೇರಿಹೋಗಿದೆ

ಸಂಜು

ನಿನ್ನ ನೆನಪಿನಲ್ಲಿ ನೆನಪಿನ ಶಕ್ತಿಗೆ ಸವಾಲ್ ಆಗಿರುವೆ
ನನ್ನ ಮರೆಯುವ ಯುಕ್ತಿಗೆ ನೀನೇಕೆ ಸವಾಲ್ ಒಡ್ಡಿರುವೆ

ಸಂಜು

ಹೃದಯ ಹೊಡೆದ ಶಿಕ್ಷೆ ಪ್ರೀತಿಯದು
ಹೃದಯ ಹೊಂದಿಕೊಂಡ ಶೈಲಿ ಸ್ನೇಹದ್ದು
ತ್ಯಾಗವನ್ನು ಬಯಸುವುದು ಪ್ರೀತಿ
ಹೇಳದೆ ಕೇಳದೆ ತ್ಯಗಿಯಂತ ನಿಲ್ಲುವುದು ಸ್ನೇಹ
 
ಸಂಜು

ಕಲ್ಪನೆಯ ಲೋಖದಲ್ಲಿ ಅವಳು
ಪ್ರೀತಿಯ ಸುಗಂಧ ಸಿಂಪಡಿಸಿ
ನನ್ನೆದೆಯಲ್ಲಿ ಒಂದು ಬಗೆಯ ಚಿಲಿಪಿಲಿ
ಕುಡಿಯದೆ ಇದ್ದರು
ನಿನ್ನ ಪ್ರೀತಿಯ ಈ ಮತ್ತಿಗೆ
ನಶೆಯಲ್ಲೇ ಚುರಾದೆ
ವಾಸ್ತವಕ್ಕೆ ಬರಲು
ಗಬ್ಬನೆ ಬಡಿದೆ ಮೂಗಿಗೆ
 
ಕೋಣೆಯ ಕಸ ಚೆಲ್ಲಾ ಪಿಲ್ಲಿ
ಮೂರ್ಚೆ ಹೋದರು
ಮತ್ತೆ ಎದ್ದು ನಿಲ್ಲುವೆ
ನಿನ್ನ ಕಲ್ಪನೆ ಲೋಖದ ಸೊಗಡಲ್ಲಿ

ಸಂಜು
 

No comments:

Post a Comment