Wednesday, May 30, 2012

ನಾನು ನೀನು ಒಂದಾದಮೇಲೆ



ನಾನು ನೀನು ಒಂದಾದಮೇಲೆ

***********************

ಕಣ್ಣೆರಡು ಸೇರಿ
ಪ್ರೇಮಕ್ಕೆ  ಕೊಟ್ಟ
ಹಸಿರು ನಿಶಾನೆ ದಾರಿ

ಹೃದಯವೆರಡು ಮಾತಾಡಿ
ಪ್ರೀತಿಗೆ ಕೊಟ್ಟ 
ಉಸಿರಿಗೆ ಜೀವನಾಡಿ

ಮನವು ಎರೆಡೂ ಮಿಂದು
ಭಾವಕ್ಕೆ ಕೊಟ್ಟ
ಹೊಸ ಕಾವ್ಯ ಒಂದು

ನೀನು ನನ್ನೊಳಗೊ
ನಾನು ನಿನ್ನೊಳಗೊ
ಹರುಷ ಸಂತೋಷ
ನನ್ನೀ ಹೃದಯದೊಳಗೆ

ಮಾತೆರೆಡು ಬೇಡ
ಮೌನದಲ್ಲೆ ಸಾವಿರ ಭಾವ
ಸುರಿದಿಹುದು ಪ್ರೀತಿ, ಕಾರ್ಮೋಡ

ಸೊರ್ಯನಿತ್ತ ಕಾಂತಿ ಚಂದ್ರನಿಗೆ
ಬೆಳದಿಂಗಳು
ನಿನ್ನ ಒಲವ ಜೊತಿ ನನ್ನೀ ಗೂಡಿಗೆ
ನಂದಾ ದೀಪವಾಗಿರಲು

ಕೂಡಬೇಕು ಒಂದುಗೂಡಬೇಕು
ನಮ್ಮೀ ಬಾಳ ಬಂಡಿ ಹೂಡಬೇಕು
ಕೊನೆ ತನಕ ನಿನ್ನ ಜ್ಯೊತೆ
ನನಗೆ ಬೇಕು

ಬಾಳಲಿ ಬರುವ ಕಷ್ಟ ದುಃಖಗಳು
ನಮ್ಮೀ ಒಲವಲ್ಲಿ ಕೊಚ್ಚಿಹೊಗಬೇಕು
ಎಲ್ಲ ಸಮಯ ನೀನು
ನನ್ನ ಜೊತೆಗಿರಬೇಕು
ಕೊನೆ ಉಸಿರಿನ ತನಕ
ನಿನ್ನ ಒಲವ ಧಾರೆ ನನಗೆ ಬೇಕು

ಅ ದೆವರಿಗೆ ಒಂದು ಕಣ್ಣು
ನಂಬಿದರೆ
ನಿನ್ನ ಪ್ರೀತಿ ಒಲವಿಗೆ
ಇನ್ನೊಂದು ಕಣ್ಣು ನಂಬಿದೆ
ಕೈ ಬಿಡದಿರು ಎಲ್ಲಿಯೂ
ಒಂಟಿ ನನ್ನ ಮಾಡದಿರು

~ಸಂಜು~

Monday, May 28, 2012

ಎಲ್ಲ ಹೆಣ್ಣು ಮಕ್ಕಳಿಗೆ ಇಂತಹ ಒಬ್ಬ ಅಣ್ಣನಿದಿದ್ದರೆ...........?

ಎಲ್ಲ ಹೆಣ್ಣು ಮಕ್ಕಳಿಗೆ ಇಂತಹ ಒಬ್ಬ ಅಣ್ಣನಿದಿದ್ದರೆ...........?

ನನ್ನ ಅವ್ವ ಪುಟ್ಟವು
ನಡೆಯ ಬೇಡ ಸುಡು ಬಿಸಿಲು
ಬಂಗಾರದ ನಿನ್ನ ಪಾದ
... ಬೆಣ್ಣೆಯಷ್ಟೆ ಮ್ರುದುವು
ಅವು ಸುಟ್ಟರೆ ನನ್ನ ಕರಳು
ಸುಡುವುದು
ನನ್ನ ಅವ್ವ ಪುಟ್ಟವು
ನಡೆಯ ಬೇಡ ಸುಡು ಬಿಸಿಲು

ಇಡಬೇಡ ನಿನ್ನ ಪಾದ
ತೊಡು ನನ್ನ ಇ ಜೊಡು
ಮೆಲ್ಲನೆ ನಡೆದು ಬಾವ್ವ
ತೊಡರಬೇಡ ತಂಗ್ಯವ್ವ
ನನ್ನ ಜೊಡು ವಸಿ ಒರಟವ್ವ
ನನ್ನ ಅವ್ವ ಪುಟ್ಟವು
ನಡೆಯ ಬೇಡ ಸುಡು ಬಿಸಿಲು

ಬೇಡ ಬಿಡು ತೆಗೆ ನನ್ನ ಜೊಡು
ಹತ್ತು ನನ್ನ ಹೆಗಲ ಕುಸೇ
ಮನಿ ತನಕ ಹೊತ್ತು ನಡೆವೆ
ಕುಸುಮಟ್ಟೆ ಆಡಿದ್ದು ನೆನಪಿದೆಯೇ
ನನ್ನ ಅವ್ವ ಪುಟ್ಟವು
ನಡೆಯ ಬೇಡ ಸುಡು ಬಿಸಿಲು

~ಸಂಜು~

ಮೌನ



ಮೌನ

*************

ಕಾರಿರುಳು ಕಗ್ಗತಲ್ಲು
ದಾರಿ ದೀಪಕ್ಕೆ ಹತ್ತಿದ್ದ ಗೆದ್ದಲು
ನಡೆದಿದೆ ಮೌನದ ದಿಬ್ಬಣ ಮೆಲ್ಲನೆ
ರೊಯ್ಯನೇ ಬೀಸುವ ಗಾಳಿಗೆ
ತುಸು ನಡುಗಿದೆ ಮನ ಝಲ್ಲನೆ
ನನ್ನವಳ ಮೌನದ ಬಿಂಕ
ಮಾತಿಲ್ಲದೆ ಉಳಿದೀತೆ ಇ ಸಂಬಂಧ
ಎಂಬ ತವಕ

ಮುಸ್ಸಂಜೆಯ ತಂಗಾಳಿ ತಂಪು
ಬಾನಂಗಳದ ಚಿಲಿ ಪಿಲಿ ಹಕ್ಕಿಯ ಇಂಪು
ನಾನಿತ್ತ ಪ್ರೀತಿ ಮಾತುಗಳ ಕಂಪು
ಬೆಳಕಿನ ರಾಜನ ದಣಿವಿಗೆ ಪ್ರೀತಿ ಇತ್ತು
ಸಾಗರನ ಕೆಂಪಿನ ಓಕಳಿಯ ಮಜ್ಜನದ ಗತ್ತು
ಲೇಪಿಸುತ್ತಿರುವೆ ಪ್ರೀತಿ ತುಂಬಿದ ಮುತ್ತು
ತೀರದಲ್ಲಿ ಮರಳಿ ಮರಳಿ ಯತ್ನಿಸುವ ಅಲೆಗಳ
ಆರ್ಭಟದಂತೆ ನನ್ನವಳ ಒಲೈಸುವ ಯತ್ನ
ನನ್ನ ಸುಮಧುರ ಪ್ರೇಮದ ಒಲವನಿತ್ತು
ಮೌನವನ್ನು ದಿಕ್ಕಾಪಾಲಗಿಸುವ ನನ್ನ ಪ್ರಯತ್ನ

ಪ್ರತಿ ಸಂಜೆ ಇದೆ ನಿತ್ಯದ ಸಲ್ಲಾಪ
ನಾಲ್ಕು ದಿನವಾಯಿತು ಇಂದಿಗೆ
ಇನ್ನು ಮುರಿಯಲೆ ಇಲ್ಲ ಕಲಾಪ
ಅವಳ ಮೌನದ ಕಬ್ಬಿಣದ ಕಡಲೆ
ಎಂತು ಮಾಡಲಿ ಎಷ್ಟು ಓಲೈಸಲೇ
ತಿಳಿಯಲಿಲ್ಲ ನನ್ನ ಸೋತ ಮನಸ್ಸಿಗೆ

ಅವಳ ಮಾತಿಲ್ಲದ ಲೋಕ
ಬೇಡವೇ ಬೇಡ ಈ ನರಕ
ಪ್ರಪಂಚವೆಲ್ಲ ನಿಂತಂತೆ ಸ್ತಬ್ದ
ನಾನು ಕಿವುಡಾದೆ ಬೇಕಿಲ್ಲ ಬೇರೆ ಶಬ್ದ
ಓ ದೈವ ನನ್ನ ಕಣ್ಣ ಮುಚ್ಚಿಸು
ಇಲ್ಲವೆ ಅವಳ ಕಂಟ ಸಿರಿ ಕೇಳಿಸು
ತಾಳಲಾರೆ ಈ ಮೌನದ ಘೋರ
ಭೂಕಂಪನದಿ ನನ್ನೇದೆ ತಳಣಿಸಿದೆ ಛಿದ್ರ ಛಿದ್ರ

~ಸಂಜು~

ಪ್ರಾರಬ್ದ ಈ ಪ್ರೇಮಾ


ಪ್ರಾರಬ್ದ ಈ ಪ್ರೇಮಾ

ಎಲ್ಲರೊಂದಿಗೆ ಸಲಿಗೆಯಲ್ಲಿ ಮಾತನಾಡುವ ನನ್ನವಳು
ನನ್ನ ಹೆಸರು ಬಂದೊಡೆ ಬೆದರಿ ಗಮ್ಮನೆ ಸುಮ್ಮನಾಗುವಳು

ಎಲ್ಲರ ಮುಂದೆ ರಾಜಾರೋಷವಾಗಿ ಮೊಬೈಲ್ ನಲ್ಲಿ ಲಲ್ಲೆ ಹೊಡೆವ ನನ್ನವಳು
ನನ್ನ ಕರೆ ಬಂದೊಡನೆ ಹೆದರಿ ಕದ್ದು ಮುಚ್ಚಿ ಕೊಣೆಗೆ ಓಡುವಳು

ಎಲ್ಲರೊಂದಿಗೆ ಬೇಟಿ ಮಾಡಲು ಮನೆಯಲ್ಲಿ ಹೇಳೆ ಹೊರಡುವಳು
ನನ್ನ ಬೇಟಿ ಮಾಡಲು ಇಲ್ಲ ಸಲ್ಲದ ಕಾರಣ ಹೇಳಿ ಮನೆಯಿಂದ ಕಾಲತೆಗೆಯುವಳು

ನಾನೆಂತು ಮಾಡಿದ ಕರ್ಮ ಪ್ರಾರಬ್ದ ಈ ಪ್ರೇಮಾ
~
ಸಂಜು ~

ನಿನ್ನ ನೆನಪಿನಲ್ಲೆ


ನಿನ್ನ ನೆನಪಿನಲ್ಲೆ

******************
ಬರೆದೆ ನಿನ್ನ ನೆನಪಿನಲ್ಲೆ
ಬರದ ಹೃದಯ ಬಾಷೆಯಲ್ಲೆ
ಕಳೆದೆ ನಿನ್ನ ಸನಿಹದಲ್ಲಿ
ಪ್ರೇಮ ಪಕ್ವ ಮತ್ತಿನಲ್ಲಿ
ನೆನೆಪು ಆ  ಸಿಹಿ ನೆನೆಪು
ಬಚ್ಚಿಟ್ಟುಕೊಂಡೆ ನನ್ನ ಹಾದಿ ಬುತ್ತಿಯಲ್ಲಿ

ಅಂದು ನಮ್ಮ ಸೊಕುತಿದ್ದ ಸವಿ ಸುಘಂದ  ಮಧುರ
ಇಂದು ನನ್ನ ಸುತ್ತಿ ಸುತ್ತಿ ಕಾಡುವ ಬ್ರಮರ
ಕಣ್ಣ ಮಿಂಚಿನಲ್ಲೆ ಸೆರೆಯಾದ ನಿನ್ನ ಸೌಂದರ್ಯ
ತೆರೆಯಲೊಲ್ಲೆ ಕಣ್ಣ ರೆಪ್ಪೆ ಅಹ್ವಾದಿಸಲು ನನ್ನ ಆಂತರ್ಯ

ಕೂಡಿದ ಒಡನಾಟ ಪ್ರತಿ ಕ್ಷಣ ಅಮೃತಗಳಿಗೆ
ನಿನ್ನ ಬಿಟ್ಟು ಬಲು ದೊರ ಬಂದ ನನ್ನ ಬದುಕಿಗೆ
ಜೀವಾ ಕೊಡುವ  ಜೀವರಸ ಪ್ರತಿ ಅಣುವಿನೊಳಗೆ

ಸೆವಿಸುತಿರುವೆ ಪ್ರತಿ ಉಸಿರಿನಲ್ಲು  ನಿನ್ನ ಹೆಸರ 
ಹೃದಯಕ್ಕೆ ಇನ್ನು ಹಿಗ್ಗು ಪಚನಿಸಲು ನಿನ್ನ ಹೆಸರ
ಸಂಗಾತಿಯಾಗು ನನ್ನ ಬಾಳ ಗತಿಯಾಗು
ಸ್ಪೂರ್ತಿಯಾಗು ನನ್ನ ಬದುಕಿಗೆ
ಚೆತನವಾಗು ನನ್ನ ಬಾಳ ಬೆಳಕಿಗೆ

ನೆನಪಿನಾಳ ಎಂತ ಸೊಗಸು
ಬೇಡವೇ ಬೇಡ ಇಹಲೋಕದ ಮಿಥ್ಯಾವಸ್ತು

~ಸಂಜು~

ಹಗಲ ಕನಸ್ಸು


ಹಗಲ ಕನಸ್ಸು

*********************
ನಡೆದಾಡುವ ಬಳ್ಳಿ
ವೈಯಾರದ ಮಳ್ಳಿ
ಮೈ ಮನ ಬಿಟ್ಟಿತ್ತು ಚಳಿ
ಅವಳ ಬಿಗಿದಪ್ಪುಗೆಯ ಸರಪಳಿ

ತುಸು ದೊರ ಕೂತು
ನೊಡಲೆತ್ನೊಸಿದೆ ಅವಳ ಕಣ್ಣ ಮತ್ತು
ನೋಡಲು ಬಿಡಲೇ ಇಲ್ಲ
ಅವಳ ಬಳಸುವ ಹಂಬಲ
ಕಣ್ಣು  ಸೇರುವುದಕ್ಕೂ  ಬಿಡಲಿಲ್ಲ
ನನ್ನ ಮನದ ಚಪಲ

ಪ್ರೀತಿ ಮುತ್ತೆ ನನ್ನ ಸಂಪತ್ತು
ಕೊಂಚ ಕೂಡ ಮಿಸುಕದ
ಅವಳ ಅಧರದ  ಗಮ್ಮತ್ತು
ಇಂಚು ಬಿಡದೆ ಅಹ್ವಾದಿಸಲು
ಸುಖದಲ್ಲೆ ತೇಲಿದ  ಮತ್ತು

ತನುವು ನಿನ್ನದೆ ಮನವು ನಿನ್ನದೆ
ಪ್ರೀತಿ ಅತಿರೆಕ ನಿನ್ನದೆ
ಸುಖದ ಉನ್ಮಾದ ನಿನ್ನದೆ
ನಿನ್ನ ಸೌಂದರ್ಯ ನಿನ್ನ ಪ್ರೀತಿ
ನಿನ್ನ ಕೆನೆಗುಳಿ ಕಣ್ಣ ಕೊನೆ ಸುಳಿ
ನೀ ಅಂದೆ  ಎಲ್ಲವೂ ನಿನ್ನದೆ

ಅತಿ ವೇಗದ ಹೃದಯ ಬಡಿತ
ನಿಂತಲ್ಲೆ ನಿಲಲಿಲ್ಲ ನನ್ನ ಕಾಲ ನೆಗೆತ
ಸ್ಪರ್ಶದ ಅತುರ್ಯತೆ ಲೋಕ ಮರೆತ
ನನ್ನ ಪ್ರಜ್ಞೆಹೀನತೆ
ಕಣ್ಣ ಬಿಟ್ಟು ನೋಡಲು ಇ ಹಗಲ ಕನಸು
ವಾಸ್ತವಕ್ಕೆ ಹೊರಬಂದ ಮನಸ್ಸು
ಸಾವಿರ ಮೈಲುಗಳ ದೊರದ ಅರಿವಿಗೆ ಬಂತು
ಬಿಸಿ  ತಾಪದ  ಸಾಗರನ  ಹಬೆ ನನ್ನ ಮುಖಕ್ಕೆ ರಾಚಿತ್ತು 

ಯಾತನೆ ಯಾತನೆ


ಯಾತನೆ ಯಾತನೆ

 ********************

ಯಾತನೆ ಯಾತನೆ ಯಾತನೆ ಎನಾಯಿತು
ಕಣ್ಣಿನೊಳಗೆ ನೆಟ್ಟ ನೊಟ ಕೊಂದೆ ಬಿಟ್ಟಿತ್ತು
ಬೇಡ ಬೇಡವೆಂದರು ಸೇರಿ ನೊವಾಯಿತು
ಸೇರಬಾರದ ಸೆಳತಕ್ಕೆ ಬಾದಿಸುತಿತ್ತು
ಮುಗ್ದ ಪ್ರೀತಿ ತಾನೆ ಮೊಳಕೆಯೊಡೆದಿತ್ತು
ಯಾತನೆ ಯಾತನೆ ಯಾತನೆ ಎನಾಯಿತು

ಮರೆಯಾದರು ಮಾಸಲಿಲ್ಲ ದೊರವಿದ್ದರು ನೊವು ಬಿಡಲಿಲ್ಲ
ತನ್ನಿನ ತಾನೆ ಶುರುವಾದ ನೋವುಗಳು ಇವು
ಎಷ್ಟೇ ಪ್ರಯತ್ನಿಸಿದರು ಆಗಲಿಲ್ಲ ಆಚೆ ಹೊರಗೆಡುವಲು
ಒಳಗೆ ಬಚ್ಚಿಡದ ಕೆಂಡ ಸುಟ್ಟಿದೆ ಕಾವು
ಯಾತನೆ ಯಾತನೆ ಯಾತನೆ ಎನಾಯಿತು

ನಿನ್ನ ಸಾಮಿಪ್ಯದ ಸುಖಃ ಬಯಸಿ ಬಯಸಿ
ಮನ ಸೊತಿದೆ ನಿನ್ನ ಪ್ರೀತಿಗೆ ಪ್ರೇಯಸಿ
ಕೊಟ್ಟ ನೊವು ಚೆಂದವೊ ನಿನ್ನ ಪ್ರೀತಿ ಚೆಂದವೊ
ಅರಿಯುವ ಗೊಂದಲಗಳಲ್ಲಿ
ಯಾತನೆ ಯಾತನೆ ಯಾತನೆ ಎನಾಯಿತು

ಬಯಸಿದ್ದು ಇದೇನ ರೀತಿ
ಕೊನಗೆ ಅರಿತಿದ್ದು ಇದೇನ ಪ್ರೀತಿ
ಸ್ಪರ್ಶಕ್ಕೆ ಆತುರುಯಲೆ
ಪ್ರೀತಿಯ ಅಹ್ವಾದಿಸಲೆ
ತಿಳಿಯದ ತಳಮಳ ಗಳಿಗೆ
ಯಾತನೆ ಯಾತನೆ ಯಾತನೆ ಎನಾಯಿತು

ನನಗೀಗ ಪ್ರತಿ ಕಾಲ ಮಳೆ ಕಾಲ
ಸುಡುವ ಬಿಸಿಲಿನಲ್ಲಿ
ನೀ ಪ್ರೀತಿ ತೊರಿದ ಬಗೆಯಲ್ಲಿ
ಮಂಜಿನ ವರ್ಷದಲ್ಲಿ ನೆನೆದಿದೆ ಇ ಮನ
ಮತ್ತೆ ಮತ್ತೆ ಸೇರುವ , ಮತ್ತೆ ಮತ್ತೆ ಪ್ರೀತಿ ಬಯಕೆಯಲ್ಲಿ
ಯಾತನೆ ಯಾತನೆ ಯಾತನೆ ಎನಾಯಿತು

~ಸಂಜು~

ವಿರಹ




ವಿರಹ

*****************

 ಪ್ರೆಮಕೆಂತು ಪರಿ
ಮನವಾಗಿತ್ತು ಆಲೆಮಾರಿ
ವಿರಹಕೆಂತು ಈ ಭಾವ
ಒಣಗಿ ಕೆಳಗೆ ಬಿದ್ದ ತರಗೆಲೆಯ
ಗಾಳಿಯಲ್ಲಿ ಹಾರಿದರು ಪ್ರಾಣ ಹಾರದ
ನೀರ ಮಟ್ಟ ಮುಳುಗಿದರು ಉಸಿರು ಕಟ್ಟದ
ಈ ಪ್ರೆಮಕೆಂತು ಪರಿ

ಅಲ್ಲೊಂದು ಜೀವ ಇಲ್ಲೊಂದು ಜೀವ
ನಡುವಿನ ಅಂತರಕ್ಕೆ
ಮೈಲು ಮೈಲಿಗೂ ನೆನಪುಗಳ ಇಂಚರಕ್ಕೆ
ಮನ ನೆನೆದು ನೆನೆದು ದಣಿದ ಭಾವ
ಕೊಂಚ ಹಿಂದಕೆ ಸರಿ ಬಾರದೆ ನಿ ಸಮಯ
ಕೊಂಚ ಸ್ತಬ್ದವಾಗಬಾರದಿತ್ತೆ ಆವಳು
ನನ್ನೊಂದಿಗಿದ್ದ ಅ ಸುಂದರ ಸಮಯ

ಉಗಿ ಬಂಡಿಗೇಕೆ ಇಷ್ಟು ಆತುರ
ನನ್ನವಳನ್ನು ನನ್ನಿಂದ ಸೆಳೆದೊಯ್ಯುವ
ಕರ್ಮ ಪಾಪದ ಕೆಲಸ ಕೊಟ್ಟವರಾರು
ನಿನಗೂ ಒಮ್ಮೆ ಪ್ರೀತಿ ಹುಟ್ಟಿ
ಅನುಭವಿಸಿ ನೊಡು ಅದರ ನೊವು
ನಮ್ಮ ಬೇರೆ ಮಾಡಿದ ಪಾಪ ತಟ್ಟದೆ
ಬಿಡುವುದಿಲ್ಲ ನಿನಗೆ

ಸಿಕ್ಕದ್ದು ಒಂದು ದಿನ
ಸಮಯ ಜಾರುವ ಸರದಿಗೆ
ಭಾಯ ಪಡಲೆ
ಇಲ್ಲ ನನ್ನವಳಿಗೆ ಪ್ರೀತಿ ಮಾಡಲೆ
ಇ ಗೊಂದಳದೊಳಗೆ ಕೊನೆಗು
ಸಮಯ ಗೆದ್ದು ಬಿಟ್ಟಿದ್ದ
ನನಗೆ ಕೈಯ ಕೊಟ್ಟಿದ

ನನ್ನಿಂದ ದೊರ ಹೊಗುವ
ಅ ಯಮ ಯಾತನೆಯ ಯಮಗಂಡಕಾಲ
ಇಬ್ಬರ ಕಣ್ಣು ತುಂಬಿದ್ದರು
ಮುಖಃ ಪೆಚ್ಚಗಾಗಿ ಸೊತ ಭಾವ ಹೊತ್ತರು
ಕೊಂಚ ಕರುಣೆ ಇಲ್ಲ ನಿನಗೆ ಕಾಲ
ನಿನಗೆ ನಿನ್ನವಳ ಸೇರುವ ಆತುರವೆ
ಅಥವ ನಮ್ಮ ಪ್ರೀತಿ ಕಂಡು
ನಿನಗೆ ಸಹಿಸಲಾರದ ಕಿಚ್ಚೆ

~ಸಂಜು~

ನಾ ಸಾಮಾನ್ಯ




ನಾ ಸಾಮಾನ್ಯ

**************

 ನಾ ಸಾಮಾನ್ಯ
ಲಿಖಿತ ಬಾಷೆ ಸಾಮಾನ್ಯ
ಅರ್ಥವಾಗದಿದ್ದರೇನು
ಪದಗಳ ಗೊಂಡಾರಣ್ಯ
ನಿಘಂಟನ್ನು ಶೊದಿಸಿ ಪದ
ತೇರಿಗೆ ಎರಿಸಲಿಲ್ಲ
ಭಾರಿ ಪದಗಳ ಕಿರೀಟ ಹೊತ್ತ
ದೇವರಿಗೆ ನನ್ನ ಮಂತ್ರ ಹಿಡಿಸಲಿಲ್ಲ
ಸುಟ್ಟ ರೊಟ್ಟಿಯಂತೆ ಪೆಚ್ಚು ಮುಖಃ
ಕಿತ್ತು ನಾಯಿಗೆ ಎಸೆದ ಭಾವ
ಬರೆದು ಬರೆದು ಕೈ ನಡುಗುತ್ತಾವ
ಮತ್ತೆ ಬರೆಯಲ್ಲೊಲ್ಲೆ
ಬೇನೆ ಸಿಡಿದು ಕೀವ್ ಮೂಡಿದ ಗಾಯಕ್ಕೆ
ನೊಣ ಮುತ್ತಿ ನೆಕ್ಕೆ ಕೆಣಕಿದೆ
ನಾ ಸಾಮಾನ್ಯ
ಲಿಖಿತ ಬಾಷೆ ಸಾಮಾನ್ಯ
ಗೈಮೆ ಮಾಡಿ ಮುದ್ದೆ ಉಂಡು
 ಓದಿ ತುಸು ನಕ್ಕ ಆರಂಬಗಾರ
ಪೂಜೆಗಿಟ್ಟ ದೇವರಿಗೆ
ಒಲೈಸಲಿಲ್ಲ ಬಿಡಿಸಿದ
ಬಣ್ಣದ ಪದಗಳ ಚಿತ್ತಾರ

~ಸಂಜು~

ನನ್ನವಳ ಸೊಬಗು


ನನ್ನವಳ ಸೊಬಗು

****************

ಕಣ್ಣ ನಿನ್ನ ಕಣ್ಣು ಸುಂದರವೇ
ಕಣ್ಣ ಕಾಡಿಗೆ ನನ್ನ ಸೆಳೆದಿದೆ
ಕಾಮನ ಬಿಲ್ಲಿನ ಹುಬ್ಬಿನ ಎಳೆ ಸುಂದರವೇ
ನಾನ ಅದರ ಆಳದ ಹೊಳಗೆ ಎಲ್ಲೋ ತೇಲಿರುವೆ
ಕಣ್ಣ ನಿನ್ನ ಕಣ್ಣು ಸುಂದರವೇ
ಕಣ್ಣ ಕಾಡಿಗೆ ನನ್ನ ಸೆಳೆದಿದೆ
ರಪ್ಪೆಯು ಬಾಗಿದೆ ಸಂಜೆಗೆ ಸೂರ್ಯನು ಇಳಿದಿಹನು
ಹಕ್ಕಿಯ ಹಾಡಿಗೆ ಪಿಳಿ ಪಿಳಿ ನರ್ತನ ನಿನ್ನ ನೊಟ
ಬಣ್ಣ ನಿನ್ನ ಬಣ್ಣ ಸುಂಧರವೆ
ಬಣ್ಣ ನಿನ್ನ ಹೊಂಬಣ್ಣ ಸೆಳೆದಿದೆ
ಬೆಳದಿಂಗಳ ಹಾಲಲ್ಲಿ ಕೇಸರಿ ನಿನ್ನ ಸೊಬಗು
ಆ ಅಂದವ ಸವಿಯುತ ನನ್ನನೇ
ನಾ ಮರೆತೇ ಮನಸೋತು
ಬಣ್ಣ ನಿನ್ನ ಬಣ್ಣ ಸುಂದರವೇ
ಬಣ್ಣ ನಿನ್ನ ಹೊಂಬಣ್ಣ ಸೆಳೆದಿದೆ
ನೊಡುತಲಿದ್ದರೆ ಕಣ್ಣ ಮನದಲಿ ಸಡಗರವು
ಕಣ್ಣನು ಮುಚ್ಚಿಯೂ ನಿನ್ನ ನೋಡುತಿದೆ ನನ್ನ ಮನವು
ಪ್ರೀತಿ ನಿನ್ನ ಪ್ರೀತಿ ಮಧುರ
ಪ್ರೀತಿ ಅಮೃತ ನನ್ನ ತುಂಬಿದೆ
ನಿದ್ದೆಯೂ ಬಾರದು ಕಾತರ ತಾಳದು ನನ್ನ ನೆಮ್ಮದಿಯೂ
ಹಸಿವನ್ನು ಮರೆತಿದೆ ನಿನ್ನ ನೆನಪಲ್ಲಿ ನನ್ನ ಜೀವವು
ಪ್ರೀತಿ ನಿನ್ನ ಪ್ರೀತಿ ಮಧುರವೇ
ಪ್ರೀತಿ ಅಮೃತ ನನ್ನ ತುಂಬಿದೆ
ಕಾರಣವಿಲ್ಲದೆ ಸುಮ್ಮನೆ ನೊವಿದೆ ನನ್ನೊಳಗೆ
ತೊರಿಸಲಾಗದೆ ಹೇಳಲು ಆಗದೆ ಒಳ ಭಾವ ತುಡಿಯುತಿದೆ
ಕಣ್ಣ ನಿನ್ನ ಕಣ್ಣು ಸುಂಧರವೆ
ಕಣ್ಣ ಕಾಡಿಗೆ ನನ್ನ ಸೆಳೆದಿದೆ
ಕಾಮನ ಬಿಲ್ಲಿನ ಹುಬ್ಬಿನ ಎಳೆ ಸುಂಧರವೆ
ನಾನ ಅದರ ಆಳದ ಹೊಳಗೆ ಎಲ್ಲೋ ತೆಲಿರುವೆ
ಕಣ್ಣ ನಿನ್ನ ಕಣ್ಣು ಸುಂದರವೇ
ಕಣ್ಣ ಕಾಡಿಗೆ ನನ್ನ ಸೆಳೆದಿದೆ

~ಸಂಜು~