Monday, May 28, 2012

ಮೌನ



ಮೌನ

*************

ಕಾರಿರುಳು ಕಗ್ಗತಲ್ಲು
ದಾರಿ ದೀಪಕ್ಕೆ ಹತ್ತಿದ್ದ ಗೆದ್ದಲು
ನಡೆದಿದೆ ಮೌನದ ದಿಬ್ಬಣ ಮೆಲ್ಲನೆ
ರೊಯ್ಯನೇ ಬೀಸುವ ಗಾಳಿಗೆ
ತುಸು ನಡುಗಿದೆ ಮನ ಝಲ್ಲನೆ
ನನ್ನವಳ ಮೌನದ ಬಿಂಕ
ಮಾತಿಲ್ಲದೆ ಉಳಿದೀತೆ ಇ ಸಂಬಂಧ
ಎಂಬ ತವಕ

ಮುಸ್ಸಂಜೆಯ ತಂಗಾಳಿ ತಂಪು
ಬಾನಂಗಳದ ಚಿಲಿ ಪಿಲಿ ಹಕ್ಕಿಯ ಇಂಪು
ನಾನಿತ್ತ ಪ್ರೀತಿ ಮಾತುಗಳ ಕಂಪು
ಬೆಳಕಿನ ರಾಜನ ದಣಿವಿಗೆ ಪ್ರೀತಿ ಇತ್ತು
ಸಾಗರನ ಕೆಂಪಿನ ಓಕಳಿಯ ಮಜ್ಜನದ ಗತ್ತು
ಲೇಪಿಸುತ್ತಿರುವೆ ಪ್ರೀತಿ ತುಂಬಿದ ಮುತ್ತು
ತೀರದಲ್ಲಿ ಮರಳಿ ಮರಳಿ ಯತ್ನಿಸುವ ಅಲೆಗಳ
ಆರ್ಭಟದಂತೆ ನನ್ನವಳ ಒಲೈಸುವ ಯತ್ನ
ನನ್ನ ಸುಮಧುರ ಪ್ರೇಮದ ಒಲವನಿತ್ತು
ಮೌನವನ್ನು ದಿಕ್ಕಾಪಾಲಗಿಸುವ ನನ್ನ ಪ್ರಯತ್ನ

ಪ್ರತಿ ಸಂಜೆ ಇದೆ ನಿತ್ಯದ ಸಲ್ಲಾಪ
ನಾಲ್ಕು ದಿನವಾಯಿತು ಇಂದಿಗೆ
ಇನ್ನು ಮುರಿಯಲೆ ಇಲ್ಲ ಕಲಾಪ
ಅವಳ ಮೌನದ ಕಬ್ಬಿಣದ ಕಡಲೆ
ಎಂತು ಮಾಡಲಿ ಎಷ್ಟು ಓಲೈಸಲೇ
ತಿಳಿಯಲಿಲ್ಲ ನನ್ನ ಸೋತ ಮನಸ್ಸಿಗೆ

ಅವಳ ಮಾತಿಲ್ಲದ ಲೋಕ
ಬೇಡವೇ ಬೇಡ ಈ ನರಕ
ಪ್ರಪಂಚವೆಲ್ಲ ನಿಂತಂತೆ ಸ್ತಬ್ದ
ನಾನು ಕಿವುಡಾದೆ ಬೇಕಿಲ್ಲ ಬೇರೆ ಶಬ್ದ
ಓ ದೈವ ನನ್ನ ಕಣ್ಣ ಮುಚ್ಚಿಸು
ಇಲ್ಲವೆ ಅವಳ ಕಂಟ ಸಿರಿ ಕೇಳಿಸು
ತಾಳಲಾರೆ ಈ ಮೌನದ ಘೋರ
ಭೂಕಂಪನದಿ ನನ್ನೇದೆ ತಳಣಿಸಿದೆ ಛಿದ್ರ ಛಿದ್ರ

~ಸಂಜು~

No comments:

Post a Comment