Tuesday, October 2, 2012

ಅಂಧ ಪ್ರೀತಿ


   ಅಂಧ ಪ್ರೀತಿ

 ಅವಳೆದೆಯಲಿ ನನ್ನ ಪ್ರೀತಿ ಕಾಣಲಿಲ್ಲ
ಅವಳ ನೋವಿನಲ್ಲಿ ಸಂಕಷ್ಟದಲ್ಲಿ ನನ್ನನೇ ನಾ ಮರೆತು ಬಿಟ್ಟೆ
ಅವಳ ಸಂಭ್ರಮ ಸಡಗರದಲ್ಲಿ ನನ್ನ ನೆನಪು ಸಹ ಆಗಲಿಲ್ಲ
ತಿಳಿಯದೆ ನನ್ನೆದೆಯ ಅವಳ ಚರಣ ದಲಿಟ್ಟೆ
ಅವಳಿಗೆ ನೆಲ ನೋಡಿ ನಡೆವ ಅಭ್ಯಾಸವೇ ಇರಲಿಲ್ಲ

ದುಖಃದ ನೆರಳು ಸಹ ಸೋಕಲು ಬಿಡಲಿಲ್ಲ
ನಾನು ಒಳಗೊಳಗೇ ಕಣ್ಣೀರಧಾರೆ ಹರಿಸಿದರು
ಒಂದು ಸಣ್ಣ ಹನಿ ಅವಳ ಕಣ್ಣಿಗೆ ಕೊಡಲಿಲ್ಲ
ನನ್ನ ನೆಮ್ಮದಿ ಸುಖ ನಾನು ಮರೆತರು
ಅವಳ ಸುಖ ಸಂತೋಷಕ್ಕೆ ಬೇಡದ ದೇವರುಗಳಿಲ್ಲ
ಪ್ರೀತಿ ಸಾಗರದ ಒಂದೊಂದು ಹನಿ ಉಣಬಡಿಸಿದರು
ನನ್ನೆದೆಯ ಒಂದು ಕಣ ಪ್ರೀತಿ ಇಂಗಿತ
ಅವಳಿಗೆ ಅರ್ಥವೇ ಆಗಲಿಲ್ಲ

~ಸಂಜು ~

No comments:

Post a Comment