Monday, October 22, 2012

ಓ ಮಲ್ಲಿಗೆ

    ಓ ಮಲ್ಲಿಗೆ
 
 
ಮಲ್ಲಿಗೆ ಓ ನನ್ನ ಮಲ್ಲಿಗೆ
ನಿನ್ನ ನೋಡಿದ ಮೇಲೆ
ನಾನು ನಿನ್ನೊಳಗೆ
ನನ್ನನೆ ಮರೆತು ಬಂದೆ
ತಂಪು ತಂಗಾಳಿಯನ್ನು
ನಿನ್ನ ಸೋಕಲು ಬಿಡಲೊಲ್ಲೆ
ಚಂದಿರನ ಕಿರಣಗಳನ್ನು
ನಿನ್ನ ಸುಡಲು ಬಿಡಲೊಲ್ಲೆ
ಬೇರೆ ಕಂಗಳನ್ನು
ನಿನ್ನ ಹಾಯಲು ಬಿಡಲೊಲ್ಲೆ
ಮಲ್ಲಿಗೆ ಓ ನನ್ನ ಮಲ್ಲಿಗೆ
 
ಹಂಬಲಿಸಿರುವೆ ನಿನ್ನ ನೆರಳ
ಸ್ಪರ್ಶಿಸಲು ನೆಲದಮೇಲೆ
ಒಂದು ಕ್ಷಣ ನೀ ಎಡವಿದರು
ಆ ಸಣ್ಣ ನೋವ ನಾ ತಾಳಲಾರೆ
ನಿನ್ನ ಮೂಗುತಿಯಾಗಿ ಸೇರಿಸಿಕೊ
ನಿನ್ನ ಅಂದಕ್ಕೆ ಮೆರುಗಾಗಿ ಇರುವೆ
ಆ ವಜ್ರದ ಮುನುಚು ನಿನ್ನ ಚುಚ್ಚಿದರೆ
ಆ ಸಣ್ಣ ನೋವ ನಾ ತಾಳಲಾರೆ
ಮಲ್ಲಿಗೆ ಓ ನನ್ನ ಮಲ್ಲಿಗೆ

ನಿನ್ನ ಹೆಸರ ಉಸಿರಲು ಮೆಲ್ಲಗೆ
ನನ್ನ ಮನೆಯ ಅಂಗಳದೆ
ಮಲ್ಲಿಗೆಯ ಸುಮ ಗಂಧ ಬೀರುವುದೇ
ನಿನ್ನೊಮ್ಮೆ ನೋಡದಿದ್ದರೆ
ಆ ಸುಮವು
ನೀನೆಲ್ಲೆಂದು ಕೇಳುವವು ಕಾತರದೆ
ನೀ ಬಂದರೆ ನನ್ನ ಮನೆಗೆ
ಮುಂಜಾವಿನ ಹೊಸ ಸೂರ್ಯ
ಕಿರಣ ಚೆಲ್ಲಿದಂತೆ
ಮಲ್ಲಿಗೆ ಓ ನನ್ನ ಮಲ್ಲಿಗೆ

ನೀನಲ್ಲಿ ಮಳೆಯಲ್ಲಿ ನೆನೆದರೆ ಸಾಕೆ
ನನಗಿಲ್ಲಿ ಚಳಿ ಜ್ವರದ ಸೋಂಕೆ
ನೀನಲ್ಲಿ ಬಿಸಿಲಲ್ಲಿ ನಡೆದರೆ ಸಾಕೆ
ನನಗಿಲ್ಲಿ ಬೆವರಿಳಿವ ಸೆಕೆ
ನಮ್ಮಿಬ್ಬರ ದೇಹ ಎರಡೇ ಇರಬಹುದೇ
ಭಾವಗಳು ಒಂದೇ
ಮಲ್ಲಿಗೆ ಓ ನನ್ನ ಮಲ್ಲಿಗೆ

ಸಂಜು

No comments:

Post a Comment