Tuesday, March 13, 2012

ಕ್ರೂರ ಬದುಕು:

ದುರ್ದೈವದಿ ಹೆಗಲು ಅಂಟಿದೆ ಬೇತಾಳಕ್ಕೆ
ಮನ ಕಾಲ ಬಿದಿದ್ದೆ ಪಾತಳಕ್ಕೆ
ಕಂಡಲ್ಲೆಲ್ಲ ಕ್ಷುದ್ರ ಮಾಂತ್ರಿಕರೆ
ತಲೆ ಬುರುಡೆ ಹಾರಕ್ಕೆ ಸತ್ಕಾರವೆ
(ಹೊಟ್ಟೆ ಕಿಚ್ಚಿನ ಜನಗಳು )

 ಬಳಿಯಲ್ಲೆ ವಿಷ ಸರ್ಪಗಳ ಹಾವಳಿ
ವಿಧಿ ಎರಡು ಕೈ ಕಟ್ಟಿದ ಮನೆ ಛಾವಣಿ
 ರೌದ್ರಾವತಾರ ಹೊತ್ತಿದೆ ಕಡುಗಪ್ಪು ರಾತ್ರಿ
 ಬೆಳಕೆಂಬ ಸುಳಿವಿಲ ಮನಕೇಕೆ ಬ್ರಾಂತಿ
(ಜೊತೆಗೆ ವಿಧಿ ಕೋಪ)

ಹಸುಗೂಸು ಹೃದಯ ತೊದಲುತಿದೆ
ಭಾವನೆಗಳು ಸುಟ್ಟು ಭಸ್ಮವಾಗಿವೆ
ಬದುಕಬೇಕೆಂಬ ಆಸೆ ಕ್ಷೀಣವಾಗಿದೆ
ಮನಸ್ಸಲೆಲ್ಲೋ ಕೊಲೆ ಶೂಲೆಗೆರೆದೆ
(ಮುಗ್ದ ಮನಸ್ಸು )

ಕಡುಗಪ್ಪು ಗೊಂಡಾರಣ್ಯ ಈ ಲೋಕ
ರಕ್ತ ಪಿಪಾಸಿ ಗಳ ಮೃಗ ವಿಕಾರ
ನಡುಗಿದೆ ಮೈ ಮನ ಥರ ಥರ
ಎಲ್ಲಿ ನೋಡಿದರೆ ಅಲ್ಲಿ ವ್ಯಗ್ರ
( ಸುತ್ತಲು ಕಾಲು ಎಳೆಯುವ ಜನ, ಪರಿಸರ)

ಕಾಣದ ಕೈಗಳ ಹಿಡಿತ
ಅಪ್ಪಳಿಸಿದೆ ಚಾಟಿಯ ಹೊಡೆತ
ಒಂದರ ಮೇಲೊಂದು ಬಾಸುಂಡೆಗಳು
ಕಾಲ ಚಕ್ರ ಮುಗಿದಿಲ್ಲ ಇನ್ನು
ಬವಣೆಯ ಬದುಕು ನಡೆಯುತ್ತಿದೆ ಇನ್ನು
(ಬದುಕಿನ ಹೊಡೆತಗಳು )

~ಸಂಜು~

No comments:

Post a Comment