Thursday, November 1, 2012

ಕನ್ನಡಿಗನು ನಾನೆಂಬ
ಅಭಿಮಾನವೆಲ್ಲಿ

 
ಕನ್ನಡದ ಮಾತೆ
ಕರುನಾಡ ದೇವತೆ
ಕನ್ನಡಿಗರು ನಾವೆಂಬ
ಅಭಿಮಾನವೆಲ್ಲಿ
ಪರ ಭಾಷಿಕರ
ಹಾವಳಿ ಇಲ್ಲಿ
ನಿನ್ನದೇ ನೆಲದಲ್ಲಿ
 
ದೂರ ದೇಶದಲ್ಲಿ
ಎಲ್ಲೋ ಕೇಳಿದರೆ
ಸಂತೋಷದಲ್ಲಿ
ದನಿ ಕೇಳಿ ಓಡಿದರೆ
ಅವನಿಗೂ ಆಂಗ್ಲದ
ಅಭ್ಯಾಸವಿಲ್ಲಿ
ಕನ್ನಡಿಗನು ನಾನೆಂಬ
ಅಭಿಮಾನವೆಲ್ಲಿ

ಕನ್ನಡ ಕಲಿಸುವ
ಗುರುಗಳಲ್ಲಿ
ಹೋದರೆ
ಗುಡ್ ಮಾರ್ನಿಂಗ್
ಅಂತಲೇ ಶುರು ಮಡಿದ
ಅಭ್ಯಾಸವಿಲ್ಲಿ
ಕನ್ನಡಿಗನು ನಾನೆಂಬ
ಅಭಿಮಾನವೆಲ್ಲಿ

ಕನ್ನಡಮ್ಮ ನೀನು
ನಮ್ಮ ಅಮ್ಮ
ಅಂತಲೇ ಕೊಂಡಾಡುವರು
ವರುಷಕೊಮ್ಮೆ ಇಲ್ಲಿ
ನಿನದೆ ನೆಲದಲ್ಲಿ
ವರ್ಷವಿಡಿ ಪರಬಾಷೆಯಲ್ಲಿ
ವ್ಯವಹರಿಸುವ
ಅಭ್ಯಾಸವಿಲ್ಲಿ
ಕನ್ನಡಿಗನು ನಾನೆಂಬ
ಅಭಿಮಾನವೆಲ್ಲಿ

ಐಟಿ ಬಿಟಿ ಗಳ
ಕಂಪನಿಗಳಲ್ಲಿ
ದೊಡ್ಡ ದೊಡ
ಮಹಲಿನಲ್ಲಿ
ಕಪ್ಪು ಗಾಜಿನ
ಪರದೆಯ ಹಿಂದೆ
ಕನ್ನಡ ನುಡಿದರೆ
ಕಕ್ಕಾ ಬಿಕ್ಕಿಯಾಗಿ
ನೋಡುವರು
ಅಪಮಾನಿಸುವಂತೆ ಅಲ್ಲಿ
ಪರಬಾಷೆಗಳು
ಯಾವುದೇ ಆಗಲಿ
ಉತ್ತರಿಸುವರು
ಅವರದೇ ಶೈಲಿಯಲ್ಲಿ
ಕನ್ನಡಿಗನು ನಾನೆಂಬ
ಅಭಿಮಾನವೆಲ್ಲಿ

ಬರೆಯುತ ಹೋದರೆ
ಈ ಕವನದಲ್ಲಿ
ಮುಗಿಯುವುದಿಲ್ಲ
ಅವಾಂತರಗಳು ಇಲ್ಲಿ
ನಿನ್ನ ಮೇಲೆ ಅಭಿಮಾನ
ಏನೇನು ಅಂತ ಹೇಳಲಿ
ಕನ್ನಡಿಗರು ನಾವೆಲ್ಲಾ
ಕನ್ನಡ ತಾಯಿಯ
ಕನ್ನಡ ಬಾಷೆಯ
ಅಭಿಮಾನವಿರಲಿ


ಜೈ ಕನ್ನಡಾಂಬೆ
ಜೈ ಕರ್ನಾಟಕ ಮಾತೆ
ಕನ್ನಡ ರಾಜ್ಯೋತ್ಸವ ಶುಭಾಶಯಗಳು


ಸಂಜು

No comments:

Post a Comment