Thursday, November 1, 2012

ಮಡದಿಯೇ , ನನ್ನ ಜೀವದ ಗೆಳತಿಯೇ


ಮಡದಿಯೇ , ನನ್ನ ಜೀವದ ಗೆಳತಿಯೇ
*********************************
 
ಮಡದಿಯೇ , ನನ್ನ ಜೀವದ ಗೆಳತಿಯೇ
ನಿನ್ನೊಲುಮೆಯಾ ಕಣ ಕಣ
ನನ್ನುಸಿರ ಕ್ಷಣ ಕ್ಷಣ ಹಿಡಿದೇ
ಸಾಗರನ ಆಳದಿ ಮುಳುಗಿ ಏಳಬಲ್ಲೆ
ನಿನ್ನೊಲುಮೆಯ ಸಾಗರದಿ
ಮುಗುಳುವುದು ಅಷ್ಟೇ ಬಲ್ಲೆ
ಮೇಲೆ ಏಳಲು ಒಲ್ಲೆ
ನಿನ್ನಾ ಆಲಿಂಗನದಲ್ಲಿ
ಎಲ್ಲ ಮರೆತು ಇರುವ ಆಸೆ
ನಿನ್ನ ತೋಳಾ ತೆಕ್ಕೆಯಲಿ
ನೂರು ನೋವ ಮರೆವ ಆಸೆ
ಮನದಲ್ಲಿ ನೆಲಸಿರು ಪ್ರೇಮ ದೇವತೆ
ನನೆದೆಯಲ್ಲಿ ವಾಸಿಸಿರುವ
ಪ್ರೇಮ ಪಕ್ಷಿಯೇ ನನ್ನ ಆರಗಿಣೆಯೇ
ಕೈ ಹಿಡಿದು ಜೊತೆ ನಡೆದು
ಬಾಳ ಸಾಗಿಸುವ ಆಸೆ
ನನ್ನ ಮನೆಯ ಅಂಗಳದಿ
ನಿನ್ನ ಪ್ರೀತಿಯ ಪುಟ್ಟ ರಂಗೋಲಿಯ
ನೋಡಿ ನಲಿವ ಮಹದಾಸೆ
ಮೂಡಣದಿ ದಿಬ್ಬವನೇರಿ
ಈ ರವಿಯಾ ಹೊನ್ನ ಕಿರಣ
ನನ್ನ ಮನೆಯ ಬೆಳಗಿದಂತೆ
ನಿನ್ನೊಲುಮೆ
ಬೆಳಧಿಂಗಳ ಶಶಿಯಾ ಬೆಳ್ಳಿ
ಕಿರಣ ನನ್ನ ಎದೆಗೆ ತಂಪೆರಗುವಂತೆ
ನಿನ್ನೊಲುಮೆ
ನನ್ನ ಬಾಳು ಹಸನಾಗಿ
ಮೊಳಕೆ ಹೊಡೆದು
ಹೊಸ ಪೈರು ಚಿಗುರಿದ
ಭೂಮಿಯಂತೆ
ನಿನ್ನೊಲುಮೆ
ನಿನ್ನ ಪ್ರೀತಿ ಎಂತು ವಿಶೇಷ
ನೀನಾಡೋ ಪ್ರೀತಿ ಮಾತೆ ನನ್ನ
ಬದುಕಿಗೊಂದು ಅವಶೇಷ
ಮನದಲ್ಲಿ ಹಾಡೋ ಮಾತೆ ನೂರು
ತುಟಿ ಬಿರಿದರೆ ಉಸಿರಿಸುವುದು ಬರಿ
ನಿನ್ನ ಹೆಸರು
ನನ್ನೊಲವಿನ ಮಂದಾಕಿನಿಯೇ
ಜೀವ ಜಲವ ಸುರಿಸು ಬಾರೆ
ನೀನಿಲ್ಲದೆ ನನಗಿಲ್ಲ ಇ ಧರೆ

ಸಂಜು

No comments:

Post a Comment