Wednesday, December 26, 2012

ಹೃದಯದಾಸೆ ಕಣ್ಣಿರಾಗಿ ಸುರಿದಿದೆ


ಹೃದಯದಾಸೆ ಕಣ್ಣಿರಾಗಿ
ಸುರಿದಿದೆ
*************
ಹೃದಯದಾಸೆ ಕಣ್ಣಿರಾಗಿ
ಹರಿಯಿತು
ಬದುಕು ತಾನಾಗೆ ಸರಪಳಿಯಲ್ಲಿ
ಬಂದಿಸಿತು
ನನ್ನೆದೆಗೆ ನಾನಿತ್ತ ಬಾಷೆ
ತಾನಾಗೆ ಮುರಿಯಿತು
ಹೃದಯದಾಸೆ ಕಣ್ಣಿರಾಗಿ
ಹರಿಯಿತು

ನಾ ಬದುಕಿರುವೆ ಯಾವುದೇ
ಆಸೆ ಇಲ್ಲದೆ
ಕಂಡ ಕನಸೆಲ್ಲ ರಾಶಿಯಾಗಿ
ಸುಟ್ಟಿದೆ
ಹೃದಯದಾಸೆ ಕಣ್ಣಿರಾಗಿ
ಹರಿದಿದೆ

ಮನದ ವ್ಯಾಕುಲತೆ ನಾ
ಯಾರಿಗೆ ಹೇಳಲಿ
ಅರಿಯುವ ಹೃದಯ
ತನ್ನದೇ ಬಾಳಲ್ಲಿ
ಬಿಡುವಿಲ್ಲದೆ ಮರೆತಿದೆ
ಹೃದಯದಾಸೆ ಕಣ್ಣಿರಾಗಿ
ಸುರಿದಿದೆ

ಸಂಜು
 

No comments:

Post a Comment