Tuesday, December 4, 2012

ವಿದೇಶ


ವಿದೇಶ 

ದೂರ ಸಾಗರದಾಚೆ ಒಂದು ದೇಶ
ಬಹು ಸುಂದರ ಅದರ ರೂಪರೇಶ
ಕೈ ಬೀಸಿ ಕರೆಯುವುದು ಇಲಿಲ್ಲದ ಆಸೆ ತೋರಿ
ಕೂಲಿ ಕಾರ್ಮಿಕರು ಸಾಗುವರು ಹಾರಿ ಹಾರಿ
ಮನ ಕುಣಿಯುವುದು ಒಂದಕ್ಕೆ ಅದಿನಾಲ್ಕು ಲೆಕ್ಕ ಕೇಳಿ
ಯಾರು ಅರಿಯರು ಇದರೊಳಗಿನ ಗಡಸು ಕಳ್ಳಿ
ಮನೆ ಮಟ ಹೆಂಡತಿ ಮಕ್ಕಳ ಬಿಟ್ಟು ಬಹು ದೂರ ಹಾರಿದರು
ಮನ ಗಟ್ಟಿ ಮಾಡಿ ಕಳುಹಿಸಿದರು ತುಂಬಿಸಿ ಕಣ್ಣಲಿ ನೀರು
ಸಹಿ ಮಾಡುವವರು ಇಲ್ಲಿ 5 ವರ್ಷಗಳ ಒಪ್ಪಂದ
5 ವರ್ಷಗಳಲಿ ಮರಳಿ ಬಾರೆವು ಎಂಬ ನಿರ್ಬಂಧ
ಸಂಜು

No comments:

Post a Comment