Thursday, July 26, 2012

ಅಮ್ಮ

ಅಮ್ಮ

ಅಮ್ಮ ನಿನ್ನ ಮಡಿಲಿನ ಕಂದ ನಾನು
ಎಷ್ಟೇ ದೊರ ವಿದ್ದರು ನಾನು
ನಿನ್ನ ಮಡಿಲಿನಲ್ಲೇ ನಾನು ಜೀವಂತ
ನನಾಗಾಗಿ ಕಣ್ಣಿರು ತರದಿರು
ನಿ ಸುರಿಸಿದಷ್ಟು ಕಣ್ಣಿರು
ತರವಲ್ಲ ನನ್ನ ಶ್ರೇಯಸ್ಸಿಗೆ
ಅದರ ಋಣ ನಾ ತಿರಿಸಲಾರೆ
ನಾ ಹುಟ್ಟಿದಾಗಲಿಂದ ಕೊಟ್ಟ ನೋವೆ ಸಾಕು
ಇನ್ನು ಪಡದಿರು ದುಖಃ ನಾ ತಾಳಲಾರೆ
ನಿನ್ನ ನೋಡಿಕೊಳ್ಳ ಬೇಕಾದ ಕರ್ತವ್ಯ ನನ್ನದು
ನಿನ್ನಿಂದ ದುರವಿರುವೆ ದೌರ್ಬಾಗ್ಯ ನನ್ನದು
ನನ್ನ ಹಡೆದೆ ಭೂಮಿಗೆ ತಂದೆ
ಅಕ್ಕರೆಯಿಂದ ಕಾಪಾಡಿದೆ
ಒಲವ ಕೊಟ್ಟೆ ಜೀವ ಬಸಿದೆ
ಸಣ್ಣ ನೋವಿಗೆ ನಿನ್ನು ಅತ್ತೆ
ನನ್ನ ಸಂತೈಸಿದೆ
ನಿನ್ನ ನೋಡಿಕೊಳ್ಳುವ ಆಸೆ ನೂರು
ಆಗುತ್ತಿಲ್ಲ ನಾನು ಏನು ಮಾಡಲು
ಅದೇ ನನಗೆ ಯಾವಾಗಲು ಕಣ್ಣಿರು
ನನಗೆ ನೋವು ಆದರೆ ನಿನ್ನ ಮಡಿಲು
ನಿನಗೆ ನೋವು ಕೇಳುವವರು ಯಾರು
ಆದೆ ನನಗೆ ಯಾವಾಗಲು ಕಣ್ಣಿರು

~ ಸಂಜು ~

No comments:

Post a Comment