Tuesday, July 24, 2012

ಓ.... ಒಲವೆ


    ಓ.... ಒಲವೆ

ನಿನಗೆ ನನ್ನ ಕಂಡರೆ ಇಷ್ಟವಾಗುವುದಿಲ್ಲವ
ಯಾಕಿಂತ ಕೋಪ ಇರಿಸು ಮುರಿಸು
ನಾ ನಿನಗೆ ಕೊಟ್ಟ ಪ್ರೀತಿ ಸಲಿಗೆ 
ನಿಜವೆನಿಸಲಿಲ್ಲವ
ನನ್ನ ಎದೆಯ ಪ್ರತಿ ಬಡಿತದಲ್ಲಿ ನಿನ್ನ ಹೆಸರು
ಒಮ್ಮೆ ಕೂಡ ನಿನ್ನಗೆ ಕೇಳಲಿಲ್ಲವ
ಪ್ರತಿ ದಿನ ಪ್ರತಿ ಕ್ಷಣ ದಲ್ಲಿ ನಿನ್ನ ನೆನಪು 
ಒಮ್ಮೆ ಕೂಡ ನಿನಗೆ ಆಕಳಿಕೆ
ತರಲಿಲ್ಲವ
ಯಾರಾದರು ನೆನೆದರು ಎಂದು ನನ್ನ ಹೆಸರು
ನೆನಪಿಗೆ ಬರಲಿಲ್ಲವ 
ತಡೆಯಲಾಗುತ್ತಿಲ್ಲ ಈ  ಘೋರ ಯಾತನೆ
ಮಣ್ಣಿನಲ್ಲಿ ನನ್ನ ಹುಗಿದು ಬಿಡು
ಇಲ್ಲವಾದರೆ ಬಾ ಪ್ರೀತಿ ಕೊಡು
ಸಾಯುವತನಕ ನಿನ್ನ ಪ್ರೀತಿ
ಹಂಬಲದಲಿ

~ ಸಂಜು ~

No comments:

Post a Comment