Wednesday, June 27, 2012

ಶ್ರೀ ಗುರು ರಾಘವೇಂದ್ರ


ಶ್ರೀ ಗುರು ರಾಘವೇಂದ್ರ

ಪೂಜ್ಯಯ ರಾಘವೆಂದ್ರಾಯ ಸತ್ಯ ಧರ್ಮ ರತಾಯಚಃ
                                              ಬಜತಾಂ ಕಲ್ಪ ವ್ರುಕ್ಷಯ ನಮತಾಂ ಕಾಮ ಧೇನವೆ


ಶ್ರೀ ಗುರು ರಾಘವೇಂದ್ರರ ಚರಣಕ್ಕೆ ನನ್ನ ಈ ಮೊದಲ ಕವನ ಅರ್ಪಣೆ

ತಂದೆ ಅಂದರು ನೀನೆ ತಾಯಿ ಅಂದರು ನೀನೆ
                                                                             
ಬಂಧು ಆಂದರು ನೀನೆ ಬಳಗ ಅಂದರು ನೀನೆ

ರಾಘವೆಂಧ್ರ ಶ್ರೀ ಗುರು ರಾಘವೆಂಧ್ರನಿನ್ನಲ್ಲಿ ಜ್ಞಾನ ಮಗ್ನನಾಗಿ ಲೋಕಮರೆವೆ

ಈ ಬದುಕಿನ ಕಷ್ಟ ಮರೆವೆ

ನನಗೇನು ಬೇಡ ನೀನಿರಲು ಮುಂದೆ

ರಾಘವೆಂಧ್ರ ಶ್ರೀ ಗುರು ರಾಘವೆಂಧ್ರನೊಂದವರಿಗೆ ನಿನ್ನ ಹೆಸರೇ ಸಾಕು

ನೀನಿರುವ ಒಂದು ನಂಬಿಕೆಯೇ ಸಾಕು

ದೀನ ದುರ್ಬಲರಿಗೆ ಕರುಣಾಮೂರ್ತಿ ನೀನು

ದಾರಿ ತಪ್ಪಿದರೆ ಕೈ ಹಿಡಿದು ನಡೆಸುವವನು ನೀನು

ರಾಘವೆಂಧ್ರ ಶ್ರೀ ಗುರು ರಾಘವೆಂಧ್ರಮಂಚಾಲಮ್ಮನ ಅಶ್ರಯದಲ್ಲಿ

ನೀನಿರುವೆ ತಂದೆ

ನಿನ್ನ ಅಶ್ರಯದಲ್ಲಿ ನಾನಿರುವೆ ತಂದೆ

ಅಲ್ಲಿಗೆ ಬಂದರೆ ಸಾಕು ನನ್ನ ಮನವು

ಹೂವಿನಷ್ಟೆ ಹಗುರ ಎಲೆಲ್ಲು ಸಂತಸವು

ರಾಘವೆಂಧ್ರ ಶ್ರೀ ಗುರು ರಾಘವೆಂಧ್ರನನ್ನ ಮನದಲ್ಲೂ ನೀನೆ ನನ್ನ ಹೃದಯದಲ್ಲು ನೀನೆ

ದಿಕ್ಕು ನೀನೆ ಧಾರಿ ನೀನೆ  ನನ್ನ ನಡೆಸುವಾತ ನೀನೆ

ನೀನು ನಡೆಸಿದಂತೆ ನಡೆವೆ ಕಷ್ಟ ದುಃಖ ಏನೇ ಇರಲಿ

ನಿನ್ನ ನಂಬಿ ನಡೆವುದಷ್ಟೆ ನನಗೆ

ರಾಘವೆಂಧ್ರ ಶ್ರೀ ಗುರು ರಾಘವೆಂಧ್ರ~ಸಂಜು~

No comments:

Post a Comment