Tuesday, June 5, 2012

ಉಪಾಯ


ಉಪಾಯ
***************

ಅವನಿಗೆ ನಾ ಮಾಡಿದ ಆಡುಗೆ ಹಿಡಿಸಲಿಲ್ಲ
ಅವನಿಗೆ ನಾ ಮಾಡಿದ ಪಲ್ಯೆ ಹಿಡಿಸಲಿಲ್ಲ 
ಅವನಿಗೆ ನಾ ಮಾಡಿದ ತಿಂಡಿ ಹಿಡಿಸಲಿಲ್ಲ
ಅವನಿಗೆ ನಾ ಮಾಡಿದ ಕಾಫಿ  ಹಿಡಿಸಲಿಲ್ಲ
ಅವನಿಗೆ ನಾ ತೊಳೆದು ಕೊಟ್ಟ ಕಾಲ್ ಚೀಲ
ಹಿಡಿಸಲಿಲ್ಲ
ಅವನಿಗೆ ನಾ ಇಸ್ತ್ರೀ ಮಾಡಿಟ್ಟ ಬಟ್ಟೆ ಹಿಡಿಸಲಿಲ್ಲ
ಸಿಟ್ಟಿಗೆದ್ದು ಒಂದು ದಿನ ಕೇಳಿದರೆ ಕಾರಣ
ಅವನು ಹೇಳಿದ ಉತ್ತರ ಇವು ಯಾವು
ನನ್ನ ಅಮ್ಮ ಮಾಡಿದ ಹಾಗೆ ಇಲ್ಲ
ಒಮ್ಮೆ ಪ್ರೀತಿಯಿಂದ ಅವನ ನೊಡೀ ನಕ್ಕೆ ಒಂದು ಸಲ
ಹೊಳೆಯಿತು ಮಿಂಚು ತಲೆಯಲಿ ಪಳ ಪಳ
 
ಅಯ್ಯೊ ದೇವರೇ ಇದು ನನಗೆ ಹೊಳೆಯಲೆ ಇಲ್ಲ
ಅತ್ತಿರ ಹೊದವಳೆ ಬಿಗಿಯಾಗಿ ಚಟೀರನೆ ಕೊಟ್ಟೆ ಕಪಾಳಕ್ಕೆ
ಮತ್ತೆ ಕೇಳಿದೆ ಇದು ನಿಮ್ಮ ಅಮ್ಮ ಕೊಟ್ಟ ಹಾಗೆ ಇತ್ತ ಅಂತ

~ಸಂಜು~


No comments:

Post a Comment