Thursday, February 2, 2012

ನತದೃಷ್ಟ

ನನ್ನ ಒಳಗೆ ನೂರಾರು
ದ್ವಂದ್ವ ಯುದ್ದ ನಡೆದಿರಲು
ಪದಗಳಿಗೆ ಪದ ಹುಡುಕುತ್ತ
ತಪ್ಪುಗಳಿಗೆ ಸರಿ ಹುಡುಕುತ್ತ..

... ಗಣಿತಕ್ಕೆ ಮಿತಿ ಇಲ್ಲ
ಶುನ್ಯಕ್ಕೆ ಬೆಲೆ ಇಲ್ಲ..
ಕೂಡಿ ಕಳೆಯುವುದಕ್ಕೂ
ಮನದಲ್ಲಿ ಅಂಕಿಗಳಿಲ್ಲ

ಸಿರಿವಂತ ಭಾಷೆ ಇದು
ನನ್ನೊಳಗೂ ಅಣಕಿಸುವುದು
ಕಡೆದು ಒಡೆದು ನಿಂತಿಹುದು.
ಬುದ್ದಿ ಹೀನ ನಾನು ಪಂಡಿತನ ಪರಿ ನನಗೆ ಸಲ್ಲದು..

ಮಣ್ಣ ಹೊತ್ತು ಹಾಕಲಿಲ್ಲ
ಸಗಣಿ ಬೆರಣಿ ಆಗಲಿಲ್ಲ
ಕೊಡಲಿಗೆ ಸೀಳು ಕಾಣಲಿಲ್ಲ
ಸುತ್ತಿಗೆಯ ಹೊಡೆತಕ್ಕೆ
ಬಿರುಕು ಬಿಟ್ಟ ಮನ ಶಿಲೆ ಆಗಲಿಲ್ಲ

ಗುರು ಬೇಕು ಶಿಷ್ಯನಿಗೆ
ಪೆಟ್ಟು ಬೇಕು ಕೈ ಗಿಣ್ಣಿಗೆ
ಬುದ್ದಿ ಬೇಕು ದೀನನಿಗೆ
ಒಲಿವಳು ಆ ಕನ್ನಡಾಂಬೆ
ಶ್ರದ್ದೆ ಇಟ್ಟ ಬುದ್ದಿವಂತನಿಗೆ

ನತದೃಷ್ಟ
ಸಂಜು..

No comments:

Post a Comment