Wednesday, February 15, 2012

ಒಂದು ಸಣ್ಣ ನೆನಪು

ಒಂದು ಸಣ್ಣ ನೆನಪು:-
ಆಗ ಕಾಲೇಜ್ ಗೆ ಹೋಗುತಿದ್ದ ಸಮಯ , ಒಂದು ರಾತ್ರಿ ಒಳಗಡೆ  ಶೆಕೆ ಎಂದು ಹೊರಗಡೆ ಓದುತಿದ್ದೆ.
ಓದುವುದು ತುಂಬಾ ಇದಿದ್ದರಿಂದ ತಲೆ ಎತ್ತದೆ ಓದುತಿದ್ದೆ .ಒಮ್ಮೆಲೇ ಏನೋ ಒಂದು ತರಹ , ಏನೋ ಮಿಂಚು ಹೋದಹಾಗೆ ಆಯಿತು. ತಲೆ ಎತ್ತಿದೆ ಯಾರೋ ಕಾಣಲಿಲ್ಲ ಮತ್ತೆ ಓದುವುದರಲ್ಲಿ ಮಗ್ನನಾದೆ. ಸ್ವಲ್ಪ ಸಮಯದ    ನಂತರ ಮತ್ತೆ ಅದೇ ಅನುಭವಾ ಮತ್ತೆ ತಲೆ ಎತ್ತಿ ನೋಡಿದೆ ...............ಸುಂದರ ನೀಳ ಕೇಶರಾಶಿ ಸುಮ್ಮನೆ ಹಾಗೆ ಒಂದು ರಿಬ್ಬನ್ ನಲ್ಲಿ ಕಟ್ಟಿ ಹಾಗೆ ಇಳೆ ಬಿಟ್ಟಿತ್ತು . ಸೊಂಟದಲ್ಲಿ ಒಂದು ಬಿಂದಿಗೆ ಹೊತ್ತು ಹೋಗುತಿದ್ದಳು ಬೆಡಗಿ ,  ಅ ಬಳುಕಿನ ನಡೆ ...ಆ ಕಡೆ ಇಂದ ಈ ಕಡೆ
ಹೊರಳಾಡುವ ಅ ನೀಲ ಕೇಶ .... ಎಲ್ಲವನ್ನು ಹಾಗೆ ನೋಡುತ್ತಾ ..... ದೂರ ರಸ್ತೆ ಕೊನೆಯವರಿಗೂ......... . ನನ್ನ ಕಣ್ಣ ದೃಷ್ಟಿ ಹಾಯಿತು... ತಿರುವಿನಲ್ಲಿ ಮಾಯವಾದ ಮೇಲೆ.....  ಮತ್ತೆ ಓದಿನಲ್ಲಿ ಮಗ್ನನಾದೆ .... ಎಲ್ಲೋ ಒಳಗೆ ಮತ್ತೆ ಬರಬಹುದು
ಮುಖ ಕಾಣಬಹುದು ಎಂಬ ಆಸೆ ಇತ್ತು ಓದುವ ಗಮನ ಸ್ವಲ್ಪ ಚಂಚಲ ಆಯಿತು.  ಕಣ್ಣು ಮತ್ತೆ ಮತ್ತೆ ರಸ್ತೆ ಕೊನೆಯ ತಿರುವಿನತ್ತ ಹೋಗುತಿತ್ತು. ಅಂದು ಕೊನೆಯ ಸರದಿಯೋ.....  ಏನೋ ಮತ್ತೆ ಬರಲಿಲ್ಲ......  ಆದರೆ ಕಣ್ಣು ಮನಸ್ಸು ಇನ್ನು ಎರಡು   ತಾಸು ಕಾಯದೆ ಇರಲಿಲ್ಲ. 
ಮರುದಿನ ಅದೇ ವೇಳೆಗೆ ನಾನು ನನ್ನ ಪುಸ್ತಕದ ರಾಶಿ ಹೊತ್ತು ಅಲ್ಲೇ ಕುಂತೆ ಆದರೆ ಮನಸ್ಸು ಮಾತ್ರ ಓದುವುದರ ಕಡೆ  ಮನವಿಲ್ಲ  ಕಣ್ಣು ಹುಡುಕುತಿದ್ದವು.... ದೂರದ... ರಸ್ತೆ ತಿರುವಿನಲ್ಲಿ ಕಂಡಿತು ಹಸಿರು ಬಣ್ಣದ ರವಿಕೆ ಅದೇ ಬಣ್ಣದ ಲಂಗ ತೊಟ್ಟ ಒಂದು ಆಕೃತಿ ,  ಮನ ಮಿಡಿಯ ತೊಡಗಿತು ಆಕೃತಿ ಹತ್ತಿರವಾದಂತೆ....  ಎದೆ ಬಡಿತ ಜೋರಾಗ ತೊಡಗಿತು...
 ಹತ್ತಿರ ಬಂದಳು ಆ  ರಾಜಕುಮಾರಿ... ಆಹಾ !! ಎಂತಹ ಸೌಂದರ್ಯ , ಎಂತಹ ಲಾವಣ್ಯ ಬಟ್ಟಲ ಕಣ್ಣು , ಗುಂಡಾದ ಮುಖ..  ಬೈತಲೆಯ ಹಣೆ ,  ಕಣ್ಣಿನ ಆಕಡೆ ಇಕಡೆ ಸುರುಳಿಯ ಮುಂಗುರುಳು, ಚಿಕ್ಕ ಬಿಂದಿಗೆ , ಕಾಮನ ಬಿಲ್ಲನೆ ತಿದ್ದಿ ತಿಡಿದ ಹುಬ್ಬು ,
 ಮುಗ್ದತೆ , ಅಚ್ಚರಿ , ಚಂಚಲ , ಗಾಬರಿ ಅಂತಹ ನೋಟ, ಸೊಂಟದಲ್ಲಿ ಅದೇ ಬಿಂದಿಗೆ , ಕೈತುಂಬಾ ಹಸಿರು ಬಿಳಿ ಗಾಜಿನ ಬಳೆಗಳು , ಜಳಿರು ಜಳಿರಿನ ಕಾಲ ಗೆಜ್ಜೆ ,  ಹತ್ತು   ಕ್ಷಣ ಹೃದಯ ಮಿಡಿಯಲಿಲ್ಲ , ಉಸಿರು ಹೂರ ಬರಲಿಲ್ಲ , ಕಣ್ಣ ರೆಪ್ಪೆ ಮುಚ್ಚಲಿಲ್ಲ ಇಂಥ ಸೌಂದರ್ಯ ಕನ್ಯೆಗೆ ..ನನ್ನ ರೂಪ ಒಮ್ಮೆ ಮರುಗಿತು, ಅಂದಿನ ರಾತ್ರಿ ಏಕೆ ನಿಲ್ಲಲಿಲ್ಲ , ಅ ಕ್ಷಣ ಹಾಗೆ ಸ್ತಬ್ದವಾಗಬರದಿತ್ತೆ ,
ಕೊಂಚ ನಿಂತು ಹೋಗಬಾರದಿತ್ತೇ , ನೀರವತೆಯಾ ರಾತ್ರಿ...ತಣ್ಣನೆ ತಂಗಾಳಿ .. ಅವಳ ಮುಂಗುರುಳನ್ನು ಆಡಿಸಿ , ಆಡಿಸಿ ನಲಿಯುತಿತ್ತು , ಆ ಸೌಂದರ್ಯ    ನನ್ನ ಕಣ್ಣು ಮನದಲ್ಲಿ ಅಚ್ಚೆ ಮೂಡಿಸಿತ್ತು,  ಒಮ್ಮೆಯೂ ನೋಡಲಿಲ್ಲ ನನ್ನ ಇರುವಿಕೆ...
ಗಮನಿಸಲಿಲ್ಲ , ಕೊಂಚ ಬೇಸರ ಗೊಂಡಿತು ಮನ ನಮ್ಮ ಮನೆಯ ತುಸು ದೂರ ಇತ್ತು ಒಂದು ಬೀದಿ ನಲ್ಲಿ ,
ಜನ ಸರದಿಯೊಂದಿಗೆ ಕಾಯ್ದು ... ತುಂಬಿಸಿಕೊಳುವ ಕಾರ್ಯ ಬರದಿಂದ ಸಾಗಿತ್ತು ,  ನನಗೆ ಅನ್ನಿಸಿದ್ದು ಇಷ್ಟೇ ಇವಳ ಸರದಿ ಕೊಂಚ  ತಡೆದು ಬರಲಿ ಎಂದು, ನಾನು ಹಾಗೆ ಪುಸ್ತಕದ ಮೇಲೆ ಕಣ್ಣು ಆಡಿಸಿದಂತೆ  ಅವಳ ಒಂದೊಂದು ಹಾವಭಾವ  ನೋಡುತ್ತಾ ಮನಸ್ಸಿನಲ್ಲೇ ಸಿಹಿ ಹಣ್ಣು ತಿನುತಿದ್ದೆ ,  ಅವಳ ವೈಯಾರದ ನುಲಿತ , ಸುತ್ತ ಇದ್ದ ಕೆಸರೂ ಮಣ್ಣಿನ ಮೇಲೆ  ಕಾಲ್ಬೆರಳಲ್ಲಿ ಏನನ್ನೋ ಬರೆದು ಅಳಿಸುವ ರೀತಿ ಇವೆಲ್ಲ  ಕಣ್ಣಿಗೆ ಹಬ್ಬವನ್ನು ಉಂಟು ಮಾಡುತಿತ್ತು. ಇವಳ ದಿನ ರಾತ್ರಿ ಅದೇ ಸಮಯಕ್ಕೆ ಓಡಾಡುವ ಪರಿ ಸಾಗಿತ್ತು ಆದ್ರೆ ಆಶ್ಚರ್ಯ ಎಂಬಂತೆ  ....ಒಮ್ಮೆಯು ನನ್ನ ಕಡೆ ಗಮನ ಕೊಡಲೇ ಇಲ್ಲ , ಅವಳಿಗೆ ಇಹಲೋಕದ ಅರಿವೇ ಇಲ್ಲದಂತೆ
ತನ್ನ  ಸಣ್ಣ ದನಿಯ ಹಾಡೊಂದನ್ನು ಹಾಡುತ್ತ ಬಿಂದಿಗೆಯನ್ನು ಆಕಡೆ ಇಕಡೆ ಆಡಿಸುತ್ತ ಸರದಿ ನಡದೇ  ಇತ್ತು ಕೊನೆಗೊಮ್ಮೆ ನನ್ನ ತೀಕ್ಷಣ ದೃಷ್ಟಿ ಬಾಣ ನಾಟದೇ ಬಿಡಲಿಲ್ಲ ರೆಪ್ಪೆಯನ್ನು ಒಂದಕ್ಕೊಂದು ಸೇರಿಸಿ ನಯನ ಮಿಲನವಾಯಿತು .
ಆಗನಿಸಿರಬೇಕು ಇಷ್ಟು ದಿನ ನನ್ನ ಇವನು ಗಮನಿಸುತಿದ್ದ ಎಂದು ಕೊಂಚ ನಾಚಿ ಒಮ್ಮೆಗೆ ಹುಬ್ಬು ತೀಕ್ಷಣವಾಗಿ ಕಣ್ಣು ಕೋಪವನ್ನು ಇಂಚು ತೋರಿತು ಸ್ವಲ್ಪ, ನನ್ನ ಹೃದಯ ಗದ್ಗಿತವಾಗಿ ಆಮೇಲೆ ಸವರಿಸಿಕೊಂಡಿತು ಅಂದಿನಿಂದ ಕಣ್ಣ ಮುಚ್ಚಾಲೆ ಆಟ ನಡೆದೇ ಇತ್ತು…………………
ಸಂಜು....

No comments:

Post a Comment