Wednesday, February 8, 2012

ಈ ಕೆಳಗಿನ ಚಿತ್ರಕ್ಕೆ ಕವನ ಬರೆಯೆರಿ

ಸಾಲು ಸಾಲು ಮಾಡಿ ಹೊರಟಿರೆಲ್ಲಿಗೆ???
ಸಾಲು ಕವನ ನೋಡಲು ಬನ್ನಿರಿಲ್ಲಿಗೆ..
ಕವಿಯ ಮನಕೆ ಹೊಕ್ಕಿ..
ಕವನವನ್ನು ಹೆಕ್ಕಿ ಹಾರಿ ನಿಮ್ಮ ಗೂಡಿಗೆ..
ಅಲ್ಲಿ ಕುಳಿತರೆ ನಿಮ್ಮ ಪಯಣ ಸಾವಿನೆಡೆಗೆ..
ಬನ್ನಿರಿಲ್ಲಿ ಭಾವುಕ ಲೋಕಕೆ..
ನನ್ನ ಕವನ ಕೇಳಿ.. ತಿರುಗಿ ಹೊರಡಿ ನಿಮ್ಮ ಗೂಡಿಗೆ..
ಅನಿತಾ ಗೌಡ..

ಒಂಟಿತನವ ಬಯಸುವೆ ಏಕೆ..
ಬೇಡವೇ ನಿನಗೆ ಸ್ನೇಹದ ಸಲಿಗೆ??
ನಿನಗೂ ಪ್ರೀತಿಯ ಭಾವನೆಯಿದೆಯೇ
ಅದರಲಿ ಸೋತು ಹೀಗಿರುವೆಯೇ??
ನಿಮ್ಮಲ್ಲೂ ಜಾತಿಯ ಬೇದವು ಇದೆಯೇ??
ನಿನ್ನನು ದೂರ ತಳ್ಳಿಹರೆ..
ವರ್ಣದ ಬೇದವು ನಿಮಗೂ ಬಂತೆ??
ಸ್ನೇಹಕೆ ಇದು ಅಡ್ಡಿ ತಂತೆ??
ಯಾಕೆ ಈ ಒಂಟಿತನ.. ಬಿಡು ಅಂತ ಸಂಗವನು..
ಹೋಗುವುದು ನಿನ್ನ ಎಲ್ಲ ಬೇಸರದ ದಿನ..
ಅನಿತಾ ಗೌಡ..
 
Onti kootha nanage indu hindu salu beke?? hindu salu kootha avake onti bege ariadeke?
Deepthi Rao..
 
ಬರೀ.. ತಮಾಷೆಗೆಗಾಗಿ.. ತಪ್ಪಾಗ್ ತಿಳಿಬೇಡೀ...:-) ಇಲ್ಲಾ... ಇವ್ರ್ಗೆಲ್ಲ... ಜೊತೆ ಸಿಕ್ತು ಅಂತ... ಜೊಥೆಲಿದ್ ನನ್ನೇ.. ದೂರ ಮಾಡಿದಾರಲ್ಲ.. ಇದ್ ಯಾವ್ ನ್ಯಾಯ... ಇಪ್ಪತ್ ಜನ ಇದ್ದೀರಾ... ನಿಮ್ ಜೋತೆಲೇ.. ನಾನ್ ಒಪ್ಪತ್ತಾದ್ರು.. ತಿನ್ಕೊಂಡ್ ಇರ್ತಿರ್ಲಿಲ್ವ...? ಅಲ್ಲ....ಇವ್ರ್ಗೆಲ್...ಲ.. ಜೊತೆ ಸಿಗೋವರ್ಗು.. ನಂಜೊತೆಲೇ... ಏ ದೋಸ್ತಿ... ಹಂ ನಹೀ.. ಚೋಡೇನ್ಗೆ... ಅಂತೆಲ್ಲ.. ಹಾಡೆಳ್ ಬಿಟ್ಟು... ನಂಗ್ ಜೊತೆಯಿಲ್ಲ.. ಅಂತ... ಈಗ.. ನಾನ್, ದೋಸ್ತು.. ದೋಸ್ತು.. ನಾ ರಹಾ.. ಪ್ಯಾರ್ ಪ್ಯಾರ್ ನಾ ರಹಾ.. ಅಂತ. .. ಹಾಡೇಳೊಂಗೆ .. ಮಾಡಿದಾರಲ್ಲ.. ಸರೀನಾ... ಇವರ್ ಹೆಂಡ್ತಿ ಮಕ್ಳು.. ಉದ್ದಾರ... ಆಗ್ತಾರ...? ನಂಗು .. ಜೊತೆ ಸಿಗ್ಲಿ... ನನ್ನ lover ಜೊತೆ.. ಜೊತೆ-ಜೊತೆಯಲಿ.. ಪ್ರೀತಿ, ಜೊತೆಯಲಿ.. ಅಂತ ಹಾಡೇಲಿ... ನಿಮಗೆಲ್ಲ.. ಉರ್ಸ್ಲಿಲ್ಲ.. ಅಂದ್ರೆ...? ಬೇಡ.. ಯಾಕ್ ಸುಮ್ನೆ ಈಗ. ಅದೆಲ್ಲ....:-)
Chandre shekhar Kanakapura ..
 
ಅಂಟಿಕೊಂಡ ಒಂಟಿ ಹೃದಯ ತಂಟೆ
ತಗೆದು ಕೆದಕಿ ಕಾಡುತಿಹುದು....
ಸಂಗ ಮರೆತು ಸಾಂಗತ್ಯ ತೊರೆದು
ಇನ್ನಿಲ್ಲದಂತೆ ಬಿಕ್ಕಿ ಬಿಕ್ಕಿ ಅಳುತಿಹುವುದು..
ಕೈ ತುಂಬ ಇರುವಾಗ ಹಲ್ಲು ಗಿಂಜಿ
... ನಕ್ಕಿದ್ದು ನೀವೇ ನನ್ನೆದುರು ನಿಂದು...
ಬರಿದಾದ ಮನದಲಿ ನೋವುಗಳ ಸಂತೆಯಲಿ
ನಾನಿರುವಾಗ ದೂರ ತಳ್ಳಿ ಸಾಲಾಗಿ ಕುಂತರೆ ಇಂದು...
.................................................ಬಸು
Basu Prajwal
 
ಒಂದು ದಾರದಂತೆ ಕಾಣುವ ತಂತಿಯೇ,
ನೀ ಈ ಪಕ್ಷಿಗಲಿಗೆಲ್ಲ ಆಸರೆಯಂತೆ ಬೀಗುತ್ತಿರುವೆ,
ನಾ ನಿರುವೆನೆಂಬ ಭಾವ ನಿನಗಿದೆ .......

ಆದರೂ ನೀನು ಕಟುಕ ಯಮನ ಪಾಶವಿದೆ ನಿನ್ನಲ್ಲಿ ,
... ಪ್ರಾಣ ಹಾರಿ ಹೋಗುತ್ತದೆ ಎಂಬ ಭಯ ಇವಕ್ಕಿಲ್ಲ,
ಚಿಲಿಪಿಲಿಯ ಇಂಚರ ನಿವಿಲ್ಲದ ಬೆಳಗು ಬೆಳಗಲ್ಲ ನಮಗೆ...

ಓ ಪಕ್ಷಿಗಳೇ ಏಳಿ ಅಲ್ಲಿಂದ ಒಮ್ಮೆ ಹಾರಿಬಿಡಿ,
ಅದು ಸಾವಿನ ಮನೆ ಬನ್ನಿ ನಿಮ್ಮ ಸೇಚ್ಚೆ ಪ್ರಪಂಚಕ್ಕೆ,
ಹಾರಾಡಿ ನಿಮ್ಮ ಹಾಡನ್ನು ಕೇಳುವಾಸೆ ನಮಗೆ ....

ಸುಜಾತ

No comments:

Post a Comment