Friday, October 12, 2012

ಪ್ರೀತಿಸು



ಪ್ರೀತಿಸು

 
ಸಂಧ್ಯಾ ಸಮಯದಲ್ಲಿ
ಸೂರ್ಯನ ಹೊಳಪಿನಂತೆ
ಮುತ್ತೊಂದು ಸಾಗರನಮೇಲೆ
ತೇಲಿದಂತೆ
ನನ್ನ ಸ್ಪಂದಿಸು ನನ್ನ ಸ್ಪರ್ಶಿಸು

ಹಕ್ಕಿಯ ಹಾಡಿನಂತೆ ,
ದುಂಬಿಯ ಪಿಸು ಮಾತಿನಂತೆ
ಆಲಿಸು , ಆನಂದಿಸು
ಸಾಗರನ ಮಡಿಲಿನಲ್ಲಿ
...
ಸೂರ್ಯನ ಮಲಗಿಸುವಂತೆ
ನಿನ್ನೊಡಲ ಮಡಿಲಿನಲ್ಲಿ
ನನ್ನ ಮಲಗಿಸು ಆಲಂಗಿಸು

ಹೃದಯದ ಗುಡಿಯಲ್ಲಿ
ದೀಪವೊಂದು ಬೆಳಗಿದಂತೆ
ನಿನ್ನೆದೆಯ ಗುಡಿಯಲ್ಲಿ
ನನ್ನ ಬಾಳ ಬೆಳಗಿಸು
ಉಜ್ವಲಿಸು
ನನ್ನ ಪ್ರೀತಿಸು ನನ್ನ ಪ್ರೀತಿಸು

ಸಂಜು

No comments:

Post a Comment