Tuesday, October 2, 2012

ನನ್ನೆದೆಯ ನಂದಾ ದೀಪ


 ನನ್ನೆದೆಯ ನಂದಾ ದೀಪ

ನನ್ನೆದೆಯ ನಂದಾ ದೀಪ
ನಿನ್ನಗಲಿಕೆಗೆ ಪಡುತಿದೆ ಈ ಮನ ಪರಿತಾಪ
ಭಾರದ ಹೃದಯದಿಂದ ಒಲ್ಲದ ಮನಸ್ಸಿನಿಂದ
ಇಡುತಿದ್ದ ಒಂದೊಂದು ಹೆಜ್ಜೆಗು
ತಿರುಗಿ ತಿರುಗಿ ನೋಡುವಾಸೆ
ಮರಳಿ ಬರಬಾರದೆ ಅ ಸಮಯ
ಆರಳಿ ನಿಲ್ಲ ಬಾರದೆ
ಆ ನಿನ್ನ ಮಲ್ಲಿಗೆಯ ಮೊಗವು
ಮತ್ತದೇ ಸುಗಂಧ ಬೀರಿ
ತಿರುಗಿ ನೋಡುವ ಆಸೆ ನೂರು
ಮರಳಿ ಬರಾಲಾರೆ ಎಂಬ ದುಃಖ ನೋವು
ನಿ ಹೋದ ದಾರಿಯಲ್ಲೇ ನಿಂತು
ನೋಡುತಿದ್ದೆ ನಿನ್ನ ನೆರಳು ಮರೆಯಗುವವರೆಗು
ನಿ ಹೋದ ದಿಕ್ಕಿನಲ್ಲಿ ಬೆನ್ನು ಮಾಡಿ ನೋಡಲು
ಲೋಖ ಶೂನ್ಯ ಒಂದೊಂದು ಹೆಜ್ಜೆಗು
ಕಾರಣವಿಲ್ಲ ಎಲ್ಲಿ ಹೋಗಲಿ ಏನು ಮಾಡಲಿ
ನಿನ್ನದೇ ನೆನಪು ನನ್ನ ಜೀವ ಹಿಡಿದಿಹುದು
ಮತ್ತೊಂದು ಆಸೆ ಹೊತ್ತು
ನನ್ನ ನಿನ್ನ ಬೇಟಿಗೆಂದು

~ಸಂಜು ~

No comments:

Post a Comment