Monday, October 22, 2012

ಹೆಣ್ಣೊಂದು ಯೋಚಿಸುತ್ತಿರುವಳು

ಹೆಣ್ಣೊಂದು ಯೋಚಿಸುತ್ತಿರುವಳು

 

ಹೆಣ್ಣೊಂದು ಯೋಚಿಸುತ್ತಿರುವಳು
ತಾನೆಲ್ಲಿ ಸುರಕ್ಷಿತ
ಹೆಣ್ಣೊಂದು ಯೋಚಿಸುತ್ತಿರುವಳು
ತನಗೆ ಯಾರು ಹಿತವರು
ಹೆಣ್ಣೊಂದು ಯೋಚಿಸುತ್ತಿರುವಳು
ತನಗೆಲ್ಲಿದೆ ಮನೆ
ಹೆಣ್ಣೊಂದು ಯೋಚಿಸುತ್ತಿರುವಳು
ತನಗೆಲ್ಲಿದೆ ಪ್ರೀತಿ
ಹೆಣ್ಣೊಂದು ಯೋಚಿಸುತ್ತಿರುವಳು
ತನಗಾವ ಬಂಧು
ಹೆಣ್ಣೊಂದು ಯೋಚಿಸುತ್ತಿರುವಳು
ತನಗೆಲ್ಲಿದೆ ಬೆಲೆ
ಹೆಣ್ಣೊಂದು ಯೋಚಿಸುತ್ತಿರುವಳು
ತನ್ನ ಭಾವನೆಗೆಲ್ಲಿದೇ ಮಹತ್ವ
ಹೆಣ್ಣೊಂದು ಯೋಚಿಸುತ್ತಿರುವಳು
ತಾನಾರಿಗಾದೆ
ಹೆಣ್ಣೊಂದು ಯೋಚಿಸುತ್ತಿರುವಳು
ತನಗೆಲ್ಲಿದೆ ಲೋಕ
ಹೆಣ್ಣೊಂದು ಯೋಚಿಸುತ್ತಿರುವಳು
ತನಗೆಲ್ಲಿದೆ ನಾಕ
-
ಚಿಂತಿಸುತ್ತಾ ಮರೆತಿಹಳು
ತಾನೇ ಇಡಿ ಜಗತ್ತಿಗೆ ಶ್ರೀ ರಕ್ಷೆ
ಚಿಂತಿಸುತ್ತಾ ಮರೆತಿಹಳು
ತಾನಿಲ್ಲದೆ ತಂಪು ತಂಗಾಳಿಯು ಹಿತವಲ್ಲ
ಚಿಂತಿಸುತ್ತಾ ಮರೆತಿಹಳು
ತಾನಿಲ್ಲದೆ ಅದು ಮನೆಯೇ ಅಲ್ಲ
ಚಿಂತಿಸುತ್ತಾ ಮರೆತಿಹಳು
ತಾನಿಲ್ಲದೆ ಪ್ರೀತಿಗೆ ಅರ್ಥವಿಲ್ಲ
ಚಿಂತಿಸುತ್ತಾ ಮರೆತಿಹಳು
ತಾನಿಲಾದೆ ಬಾಂಧವ್ಯವಿಲ್ಲ
ಚಿಂತಿಸುತ್ತಾ ಮರೆತಿಹಳು
ತಾನಿಲ್ಲದೆ ಯಾವ ವಸ್ತುವಿಗು ಬೆಲೆ ಇಲ್ಲ
ಚಿಂತಿಸುತ್ತಾ ಮರೆತಿಹಳು
ಭಾವನೆಗಳ ಉಗಮ ಸ್ಥಾನವೇ ತಾನು
ಚಿಂತಿಸುತ್ತಾ ಮರೆತಿಹಳು
ತಾನಾರಿಗಾಗದೆ ಯಾರಿಲ್ಲ
ಚಿಂತಿಸುತ್ತಾ ಮರೆತಿಹಳು
ತಾನಿಲ್ಲದೆ ಲೋಕವಿಲ್ಲ
ಚಿಂತಿಸುತ್ತಾ ಮರೆತಿಹಳು
ತಾನೇ ಒಂದು ನಾಕ
~ಸಂಜು ~

No comments:

Post a Comment