ದನಿ ಕೇಳಿಸು ಗೆಳತಿ
ಕರೆದರು ಕೇಳದೆ ಹೋದೆ
ಕೂಗಿ ಹಾಡಿಹೆ ಇಂದು
ಮನದಲ್ಲಿ ಇಲ್ಲದ
ನೋರು
ಭಾವಗಳ ಆರಳಿಸಿ ಹೋದೆ
ನಿನ್ನ ಮೂಕ ಮೌನ
ತಾಳಲಾರೆ ತುಟಿ
ಬಿರಿಯದೆ
ಒಂದು ಮಾತನಾಡದೆ
ಏಕೆ ಈ ಮೌನ
ಗಿಡ ಮರ ಹಕ್ಕಿ
ಬೆಟ್ಟ ಗುಡ್ಡ ನದಿ
ಇವೆಲ್ಲವಕ್ಕು ಮಾತು ಕಲಿಸಿದವಳು
ಚಿಟ ಪಟನೆ
ಪಟಾಕಿಯಂತೆ
ಸಿಡಿಯುತಿದ್ದವಳು
ಇಂದೇಕೆ
ಈ ಅಕಾಲ ಮೌನ
ಪ್ರೀತಿ ಒಲ್ಲದ ಮೇಲೆ
ಗೆಳತಿ ನಾನು ಸಲ್ಲದ
ಮೇಲೆ
ಸ್ನೇಹ ಒಪ್ಪಿಸಿಕೋ
ಅದಕ್ಕು ಬೇಡವಾದರೆ
ನನ್ನ ಪ್ರಾಣ
ಒಪ್ಪಿಸಿಕೋ
ನಿನ್ನ ಮೌನ ತಾಳಲಾರೆ
ಮಾತನಾಡು ಗೆಳತಿ
ನನ್ನೊಂದಿಗೆ
ಅಲ್ಲದಿದ್ದರು
ನಿನ್ನವರೊಂದಿಗೆ
ದೂರದಲ್ಲೇ ನಿಂತು
ನಿನ್ನ ದನಿ ಕೇಳಿ
ಸಂತಸ ಪಡುವೆ ಆನಂದಿಸುವೆ
~ ಸಂಜು ~
No comments:
Post a Comment