Friday, October 12, 2012

ನಿನ್ನ ಮರೆಯುವ ವಿಫಲ ಯತ್ನ

 
ನಿನ್ನ ಮರೆಯುವ ವಿಫಲ ಯತ್ನ
ಅಂತರಗಳು ಹೀಗು ಇರಾಬಹುದೇ
ಎಂದು ಯೋಚಿಸಿರಲಿಲ್ಲ
ನಿನ್ನ ನನ್ನ ಮುಂದೆ ಇದ್ದರು
ನೀ ನನ್ನವಳಾಗೀರಲಿಲ್ಲ
ನೀ ಒಂದು ಸುಗಂಧದಂತೆ ನನ್ನ ಸುತ್ತುತಿದ್ದೆ ಯಾವಾಗಲು
ಅನುಭವಿಸುತ್ತಿದೆ ಆದರೆ ಸ್ಪರ್ಶಕ್ಕೆ ಸಿಗುತ್ತಿರಲಿಲ್ಲ
ರಾತ್ರಿಯಲ್ಲಿ ನೀ ಕೂಗಿದ ಧ್ವನಿ ನನಗೆ ಕೇಳುತಿತ್ತು
ಎದ್ದು ನೋಡಿದರೆ ಎಲ್ಲು ಕಾಣುತಿರಲಿಲ್ಲ
ಅನುಭವಕ್ಕೆ ಬರುತ್ತಿದೆ ನೀನು ನನ್ನ ಸುತ್ತು ಕೋಣೆಯಲ್ಲಿ
ಆ ಭ್ರಮೆಯಲ್ಲು ನೀನು ಸಿಗುತ್ತಿರಲಿಲ್ಲ
...
ಕನ್ನಡಿ ಇತ್ತು ಒಂದು ಮೂಲೆಯಲ್ಲಿ
ಅದರಲ್ಲಿ ನಿನ್ನ ಬಿಂಬ ಕಾಣುತಿರಲಿಲ್ಲ
ಬದುಕಿನ ಸಂಕಷ್ಟದ ನೋವಿಗೆ ನಾ ಆಳುತಿದ್ದೆ
ನನ್ನೊಂದಿಗೆ ಆಳಲು ನೀ ಅಲ್ಲಿ ಇರಲಿಲ್ಲ
ಇಷ್ಟೆಲ್ಲಾ ನೋವು ನೀನಿಲ್ಲದ ಕಾರಣ
ಕಣ್ಣು ತೇವ ಕೊಂಡಿದೆ ನಿನ್ನ ಅನುಭವಕ್ಕು ಬರಲಿಲ್ಲ
ನೆನಪಿನಲ್ಲಿಟ್ಟುಕೊಳಲ್ಲು ಬಹಳ ನೋವಾಗುವುದು ಗೆಳತಿ
ಮರೆಯಲು ನಿನ್ನ ಈ ಜನ್ಮದಲ್ಲಿ ಸಾದ್ಯವಿಲ್ಲ

ಸಂಜು

No comments:

Post a Comment