ಹೃದಯ ಸಮರ್ಪಣೆ
ನಿನ್ನ ಕಣ್ಣುಗಳ ನೋಟದಲ್ಲಿ ಏನಿದೆ
ನನ್ನ ಪ್ರೀತಿ ಹಂಬಲ ಅವು ಸಾರಿವೆ ಹೃದಯದ ಬಡಿತ ನಿಂತೊಮ್ಮೆ ನೋಡು
ಈ ಸುಂದರ ದೃಶ್ಯ ಇನ್ನೆಲಿದೆ
ಹೌದು ಎಂದು ಸಮ್ಮಿತಿಸಿರುವೆ
ನಿನ್ನ ಕಂಗಳ ಈ ನಿರ್ಧಾರ ನನ್ನ ದೃಷ್ಟಿಯ ಕಿರಣ ಒಂದೊಂದೇ
ಸಾರಿದೆ ಧನ್ಯದ ನಮಸ್ಕಾರ
ನಗುತ ಸಂತೋಷದೆ ನಿನ್ನ ಬದುಕಿನಲ್ಲಿ
ಸೇರಿಸಿದೆ ನನ್ನ ಹೆಸರ ನನ್ನ ಹೆಸರಿಗೆ ಅರ್ಥ ಸಿಕ್ಕಂತಾಗಿ
ಕರೆಯಲು ಎಷ್ಟು ಸುಂದರ
ನಿನ್ನ ಬರವಸೆ ನನ್ನ ಸ್ನೇಹ
ನನ್ನ ಬರವಸೆ ನಿನ್ನ ವಿಶ್ವಾಸ ನನ್ನ ಬದುಕಿನ ಹಾದಿ ನಿನ್ನ ಗುರಿ
ಇಂತ ಅದೃಷ್ಟ ನನಗೆ ತಂದಿರಿ
ನನಗಿನ್ನೆಲಿದೆ ಭಯ ಬಿರುಗಾಳಿಗೆ
ನನ್ನ ನಾವಿಕ ನಿನ್ನ ಪ್ರೀತಿ ನನಗಿನ್ನೆಲಿದೆ ಭಯ ಸುಳಿಗಾಳಿಗೆ
ನಿನ್ನೊಲವ ಗುಡಿಸಲಲ್ಲಿ ಎಂತ ಭೀತಿ
ಬಿತ್ತು ನನ್ನ ಹೃದಯದ ಮೇಲೆ
ನಿನ್ನ ಆಶ್ರಯದ ನೆರಳು ಉಸಿರ ಉಸಿರಿಗೂ ಮಾಡಿವೆ
ನಾದ ಸ್ವರದ ರಾಗಗಳು
ನಿನ್ನ ಪ್ರೀತಿಯ ಅಮಲಿನಲ್ಲಿ
ತೆರಿದಿದೆ ಸ್ವರ್ಗದ ಬಾಗಿಲು ನಿನೋಡಲ ಮಡಿಲಿನಲ್ಲಿ
ಪಡೆದಿದೆ ಅಮೃತ ಸುಧೆಯು
ಸಂಜು
No comments:
Post a Comment