Tuesday, October 16, 2012

ಹೃದಯವಿಂದು ಕವಿಯ ಮಾಡಿದೆ

ಹೃದಯವಿಂದು ಕವಿಯ ಮಾಡಿದೆ

ಹೃದಯವಿಂದು ಕವಿಯ ಮಾಡಿದೆ
ಬದುಕಿನ ಹೊಡೆತಗಳ ನೋವಿಗೆ
ತನ್ನಳುವಿನೊಂದಿಗೆ
ಹೃದಯವಿಂದು ಕವಿಯ ಮಾಡಿದೆ

ಭರವಸೆಯ ಹಣತೆ ಆರಿದೆ
ಆಸೆಗಳ ತೈಲ ಉರಿದು
ಮನಸೊಳಗೆ ಗೋರಿ ಕಟ್ಟಿದೆ
ಭಾವಗಳು ಮಡಿದು
ಈ ಮೌನರಾಗದೆ
ಹೃದಯವಿಂದು ಕವಿಯ ಮಾಡಿದೆ

ಪ್ರೀತಿಸುವ ಹೃದಯವಿಲ್ಲ
ನನ್ನ ತೊರೆದು
ಜೀವವಿಟ್ಟು ಪ್ರೀತಿಸಿದ ಪಾಪಕ್ಕೆ
ಶಾಪವಿತ್ತಿದೆ ಇಂದು
ಈ ಒಂಟಿತನದೆ
ಹೃದಯವಿಂದು ಕವಿಯ ಮಾಡಿದೆ

ಧಿಕ್ಕು ಧಿಕ್ಕಿಗೆ ಅಲೆದರು
ಬಿಡಲೊಲ್ಲ ಈ ಭೀತಿ
ನೆನಪಾಗಿ ಕಾಡುವುದಲ್ಲ
ನೀ ಬಿಟ್ಟೋದ ರೀತಿ
ನೀನಿಲ್ಲದ ಈ ಬದುಕಿಗೆ
ಹೃದಯವಿಂದು ಕವಿಯ ಮಾಡಿದೆ

ಸಂಜು

No comments:

Post a Comment