ನಿನ್ನ ಹಾದಿ
ನಿನ್ನ
ದಿಟ್ಟಿಸಿದ ಕಣ್ಣುಗಳು
ನನ್ನ
ಚಿತ್ತ ನಿನ್ನ ಸೌಂದರ್ಯಕ್ಕೆ ಮರುಳು ಇ ಚಿತ್ತದಿ ನೀನು ನನ್ನಿಂದ ದೊರವಾಗಿದ್ದು
ಅರಿಯದೆ ಹೋಯಿತು
ದಿನದ
ಆರಂಬ ಕನ್ನಡಿಯಲಿ
ನಿನ್ನ
ಕಾಣುವ ಆಸೆಯಲಿ ಸಜ್ಜಾಗುತಿದ್ದೆ ಭಾರಿ ಭಾರಿ
ನನ್ನೆದೆಯ ಸೌಂದರ್ಯವನ್ನು
ಚೆಲ್ಲುತ್ತ ಸಾಗಿದೆ ನನ್ನ ಮುಗುಳುನಗೆಯಲ್ಲಿ
ಆರಾಧಿಸುತಿದ್ದೆ
ನಿನ್ನ ದೇವತೆಯಾಗಿಸಿ
ಪ್ರತಿ
ದಿನಕ್ಕೊಂದು ಪ್ರತಿಮೆ ಮಾಡಿಸಿ ನನ್ನೆದೆಯಲಿ ಪ್ರತಿಷ್ಠಾಪಿಸಿ
ದೇವತೆಯಂತೆ ಮಾಯವಾದೆ
ನಿನ್ನೆಡೆಗೆ ಚೆಲ್ಲಿದ ಹೂವು ಬಾಡಿಸಿ
ಕೊನೆಯದಾಗಿ
ಶ್ರಮಿಸಿದೆ
ಬರಲು
ನಿನ್ನ ಮನೆಯ ಹಾದಿಗೆ ನನ್ನ ಬದುಕಿನ ಕೊನೆಯ ಸ್ನಾನ
ಮುಗಿದೇ ಹೋಗಿತ್ತು ಮನೆ ಬಿಡುವಷ್ಟರಲ್ಲಿ
~ಸಂಜು~
No comments:
Post a Comment