Monday, October 8, 2012

ಓ ನನ್ನ ಜೊತೆಗಾತಿ


   ಓ ನನ್ನ ಜೊತೆಗಾತಿ

ಓ ನನ್ನ ಜೊತೆಗಾತಿ
ನಿಜವೇ ಸುಳ್ಳೇ ಈ ಪ್ರೀತಿ
ಸುಳ್ಳಿನ ಮಾಯಾ ಮೋಹ
ಈ ಲೋಖದ ನೀತಿ
 
ಈಗ ಯಾವ ದಿಕ್ಕಿಗೆ ಹೋಗಲಿ
ಎಲ್ಲೆಂದು ನನ್ನ ಗೂಡ ಸೇರಲಿ
ಕೊಂಚ ನನ್ನ ಸಂಬಾಲಿಸು
ಆಗಾಗೆ ಸ್ವಲ್ಪ ಪ್ರೀತಿಸು
ಹೃದಯದ ನೋವಿಗೆ ಸ್ಪಂದಿಸು
ಓ ನನ್ನ ಜೊತೆಗಾತಿ
ನಿಜವೇ ಸುಳ್ಳೇ ಈ ಪ್ರೀತಿ

ಮಡಿಲ ತುಂಬಿ ತಂದಿಹುದು
ಕತ್ತಲೆ ನನ್ನ ಬಾಳ ಹೊದ್ದಿಹುದು
ಹಗಲು ವೇಷದಾರಿ ಬೆಳಕು
ಮನಕೆ ಶಾಂತಿ ಒಂದು ಬೇಕು
ಜೋಗಳವಾಗಿದೆ ನಿನ್ನ ನೆನಪು
ನಿದ್ರೆ ಬಾರಲು ಏಕೋ ಮುನಿಸು
ಕಾಣುತಿಹನು ಸೊರಗಿದಂತೆ
ಬೆಳಧಿಂಗಳ ಚಂದಿರ

ಓ ನನ್ನ ಜೊತೆಗಾತಿ
ನಿಜವೇ ಸುಳ್ಳೇ ಈ ಪ್ರೀತಿ

ಗಾಜಿನಂತೆ ಹೃದಯ
ಹೊಡೆದರೆ ಉಳಿಯುವುದಿಲ್ಲ
ನಿನ್ನ ಈ ಇನಿಯ

ಓ ನನ್ನ ಜೊತೆಗಾತಿ
ನಿಜವೇ ಸುಳ್ಳೇ ಈ ಪ್ರೀತಿ
ಸುಳ್ಳಿನ ಮಾಯಾ ಮೋಹ
ಈ ಲೋಖದ ನೀತಿ
ಈಗ ಯಾವ ದಿಕ್ಕಿಗೆ ಹೋಗಲಿ
ಎಲ್ಲೆಂದು ನನ್ನ ಗೂಡ ಸೇರಲಿ
ಕೊಂಚ ನನ್ನ ಸಂಬಾಲಿಸು
ಆಗಾಗೆ ಸ್ವಲ್ಪ ಪ್ರೀತಿಸು
ಹೃದಯದ ನೋವಿಗೆ ಸ್ಪಂದಿಸು
ಓ ನನ್ನ ಜೊತೆಗಾತಿ
ನಿಜವೇ ಸುಳ್ಳೇ ಈ ಪ್ರೀತಿ

~ಸಂಜು ~

No comments:

Post a Comment