Tuesday, January 31, 2012

ಮನಸ್ಸಿನ ತಳಮಳ

ಭಾವನೆ :-
ರಾತ್ರಿ ಶಾಂತತೆಯ ನೀರವತೆ
ತಣನೆಯ ತಂಗಾಳಿ ಸ್ಫಟಿಕದಂತೆ ಸ್ಪಷ್ಟ
ಚಂದಿರನ ಸವರಿ ಹುಲ್ಲುಗಾವಲಿನಮೇಲೆ
ಸುತ್ತುವರೆದಿಹ ತಾರೆಗಳ ಹೊಳೆವ ಚುಕ್ಕಿ ಬೆಳಕು
 ನಧಿಯ ಚಾಚಿನಲ್ಲಿ  ಮೆದುವಾಗಿ ಮಿಯುತಿಹವು
ಬಾಗಿದ ಮರದ ರೆಂಬೆ ತೇಲುತಿದೆ ನಧಿಯ ರಭಸದೊಂದಿಗೆ
ತೆಳ್ಳಗಿನ ಪರದೆಯಂತ ಮಧುರ ಬೆಳಕಿನಲಿ
ಅಸ್ತಿತ್ವ :
ಚಾಟಿಎಂತೆ ಹಪ್ಪಳಿಸಿತು ವಾಸ್ತವತೆ
ಮರುಭೂಮಿಗೆ ಬಂದಂತೆ ಬದುಕಿನ ಅಂತರಾಳಕ್ಕೆ ಮರಳಿದಾಗ
ಎಲ್ಲವು ಮಾಯವಾದವು ಪವಾಡದಂತೆ
ಹುಮ್ಮಸ್ಸು :
ಆದರೆ ಎಲ್ಲವು ಸಾದ್ಯ ಅನಿಸುತ್ತದೆ
ಮನಸ್ಸು ಎಣಿಸಿದಂತೆ ಮಾರ್ಗ ಹವಣಿಸಿದೆ
ಹುಳಿ ದ್ರಾಕ್ಷಿ ಕೂಡ ಹಣ್ಣು ಆಗುವುದು
ಸುಗ್ಗಿಯ ಫಸಲು ಕೈಗೆ ಸೇರುವುದು
ಪಯಣ :
ನಡೆಯುತಿರುವೆ ಹುಣಿಮೇಯ ಬೆಳಕಿನ ನೆರಳಿನೊಂದಿಗೆ
ಮಿಂಚು ಹುಳುಗಳ ಫಳ ಫಳ ಪ್ರಣಯ ಪ್ರಸಂಗದೊಂದಿಗೆ
ಮಿಡಿತೆಯು ಬೆಚ್ಚನೆ ಅಡಗಿದೆ ತನ್ನ ಕಿರಿ ಕಿರಿ ಗಾನದೊಂದಿಗೆ
ಭಯ :
ನಡೆಯುತಿರುವೆ ಪ್ರೇತ ಪಿಸಾಚಿಗಳ ಹವೆಯಲ್ಲಿ
ಬೆಂಕಿ ಹುಂಡೆ ಕಿರು ನಾಲಿಗೆ ಚಾಚಿದೆ
ರಕ್ತ ಪಿಪಾಸಿ ನೆತ್ತರ ಹಿರಿದೆ
ಭಯಂಕರ ಮಾಯಾವಿ ರಾತ್ರಿ
ಯಾವ ಮಂತ್ರದಂಡವೋ ಬೇಸಿಗೆಯ ಒಣ ಹವೆಯನ್ನು
ಹೊಸ ಪ್ರಮಾಣದಲ್ಲಿ ವಿಸ್ತರಿಸಿದೆ
ಸಮತೋಲನೆ ಸಾದನೆ :
ಇಂತಹ ವಿಚಿತ್ರ ತಾಣದಲ್ಲಿ ನನ್ನ ಆತ್ಮ
ಹೊಸದಾಗಿ ಹುಟ್ಟಿದೆ ಹೊಸ ಚಂದ್ರನ ಬೆಳಕು
ಮುಲೆ ಮೂಲೆಗೂ ಚಾಚಿದಂತೆ
ಮರೆತಂತಾಗಿದೆ ನಿಜ ಸತ್ಯವು
ಗಾಳಿ ತಂಗಾಳಿಯಂತೆ ಸ್ವಚ್ಚ
ಹಿತವಾದ ಕನಸ್ಸನು ಹೇಳಿದೆ
ಹಾಗು ಸೂಕ್ಷ್ಮವಾಗಿ ಶೋದಿಸಿದೆ
ಹೊಸ ಪ್ರಕಾಶಮಾನದ ಹಗಲ ಬೆಳಕೊಂದನ್ನು
~ಸಂಜು~

No comments:

Post a Comment