Tuesday, January 31, 2012

ನಾನು ನನ್ನ ಮಡದಿಯ ಗಂಡ

ನಾನು ನನ್ನ ಮಡದಿಯ ಗುಂಡ
 ಅವಳು ನನ್ನ  ನೆಚ್ಚಿನ ಗುಂಡಿ
 ಹುಡಿದೆವೆ ಬಾಳಿನ ಬಂಡಿ

 ಮೊದಲಬಾರಿ ನನ್ನ ಕಂಡು ತುಸು ಹೆದರಿದ್ದಳು
... ನನ್ನ ಸ್ನೇಹ ಕಂಡಮೇಲೆ ಬೆಸೆದಳು
 ನಾ ಕಂಡ ಮೊದಲ ಪಾರಿಜತಾ ಅವಳು

 ಮಧು  ಮಗಳಾಗಿ ನಿಂತರು ಇನ್ನು ತಿರದ ಸಂಶಯ
 ತಾಳಿ ಕಟ್ಟುವಾಗ ಕೂಡ ಕಣ್ಣಿನಲ್ಲೇ ಅ ಭಯ
 ಕಣ್ಣಿನಲ್ಲೇ ಹೇಳಿದೆ ನಮ್ಮದು ಜನ್ಮಾಂತರ ಪರಿಚಯ
 ಮನಸ್ಸಿನಲ್ಲೇ  ಅನಿಸಿದುಂಟು ಹೊಸದೇನಲ್ಲ   ನಿನ್ನ ನಂಟು
 ನಾ ಕಟ್ಟಿದ ಮೂರೂ ಗಂಟು ಲೋಕದ ಪರಿಪಾಟು
 ಹೃದಯ ಸ್ನೇಹ ಬೇಸದಿತು ಉಸಿರು ಎಂದೋ ಬೇರೆಸಿತು

 ಕೈಯ ಮೇಲೆ ಕೈಯ್ಯ ಇಟ್ಟು ಬರವಸೆ ಒಂದು ಕೊಟ್ಟು
 ಸಂಶಯ ಬೇಡ ನಿನಗೆ ಸತಿ ಹೃದಯದಲ್ಲೇ ನಿನಗೆ  ವಸತಿ
 ಪ್ರೀತಿ ಪ್ರೇಮದ  ಕೊರತೆ ಇಲ್ಲ ನಿನ್ನದೇ ನನ್ನದೇಲ್ಲ

 ಬಾಳಿನಲ್ಲಿ ಬರವು ಕಷ್ಟ ಸುಖಗಳೆಲ್ಲ
 ಕೂಡಿವೆ  ನ ಕಹಿ ಬೆವನೆಲ್ಲ
 ಕೊಡುವೆ ನಿನಗೆ ಸಿಹಿ ಸಕ್ಕರೆ ಬೆಲ್ಲ

 ಅರ್ದಂಗಿನಿಯಾ ಪಾತ್ರ ನಿನ್ನದು 
 ಉಳಿದ ಅರ್ದ ಮಾತ್ರ ನನ್ನದು
 ಸೇರಿ ಹಾಡೋಣ ಬಾಳ ಶ್ರುತಿ ಹಿಡಿದು
 ಸರ್ವ ತ್ಯಾಗ ಮಾಡಿ ನೀ ಸಹದರ್ಮಿಣಿ
 ನನಗೆ  ಸಿಕ್ಕ ಬಾಗ್ಯಕ್ಕೆ ಸದಾ ಋಣಿ
 ಸ್ವರ್ಗದರಾಸಿ ನನ್ನವರಿಸಿ ನಿ ಪತಿಶಿರೋಮಣಿ

No comments:

Post a Comment