Tuesday, January 31, 2012

ಸಂಕ್ರಾಂತಿ ಹಬ್ಬದ ನೆನಪು

೧೯೯೯ ~೨೦೦೧ ರ ಆಸುಪಾಸಿನಲ್ಲಿ ನಾನು ತುಮುಕುರು ಸೋಮೇಶ್ವರ ಬಡಾವಣೆಯಲ್ಲಿ
ಇದ್ದಾಗ ಒಂದು ಸುಂಧರ ಸಂಕ್ರಾಂತಿ ಹೀಗಿತ್ತು
ಅದು ಅಗ್ರಹಾರದ ಬೀದಿ ತುಂಬಿ ತುಳುಕುವ ವಟಾರಗಳು
ಮುಂಜವೆನಲ್ಲೇ ಎಲ್ಲರ ಜಳಕ ಆಗಿ ಪೂಜೆಗೆ ಅತುರಾತುರದೆ ಹೊಡಾಟ,
ಮಾರಿಗಿ ಅತ್ತರಂತೆ ಸೇವಂತಿಗೆ ಕೊಡುವ ಹುವ್ವ ಮಾರುವವಳು
... ಎಲ್ಲೆಲ್ಲು ಸಾಂಬ್ರಾಣಿ, ಅಗರ ಬತ್ತಿಯ ಮತ್ತು ತುಪ್ಪದ ಘಮ,
ಹಿಂದಿನ ರಾತ್ರಿಯೇ ಟೈಲರ್ ಅಂಗಡಿಯೇಲ್ಲೇ ಕೂತು
ಅತುರಾತುರದೆ ಹೋಲಿಸಿದ ರೇಷ್ಮೆ ಹುಡುಗೆ ತೊಡುಗೆಗಳು,
ಚಿಗುರು ಮಾವಿನೆಲೆಯ ತೋರಣ , ಕಬ್ಬಿನ ಜಲ್ಲೆಯ ಆಕಡೆ ಈಕಡೆ ಜೋಡಿಸಿದ ವೈಭವ,
ಒಬ್ಬರಿಗಿಂತ ಒಬ್ಬರು ಪೈಪೋಟಿಮೇಲೆ ಬಣ್ಣ ಬಣ್ಣದ ಜ್ಯೋತೆ ಹೂವಿನ
ಅಲಂಕಾರದಲ್ಲಿ ಕಂಡ ಸುಂದರ ರಂಗೋಲಿ,
ಕೊಳೋವೆಯಲ್ಲಿ ಹೋಗುವ ಸೌದೆ ಹಂಡೆ ಒಲೆಯ ಹೋಗೆ
ಎಂಥಹ ಚಿತ್ರಣ ಇದನ್ನ ನಮ್ಮ ಮಕ್ಕಳು ಎಂದು ಕಾಣರು
ಸಂಜೆವೇಳೆ ಒಬ್ಬರಿಗಿಂತ ಒಬ್ಬರು ಪೈಪೋಟಿಮೇಲೆ ಅಲಂಕಾರ
ವಟಾರದ ಬೀದಿಯೇಲ್ಲಿ ಕಣ್ಣಿಗೆ ಹಬ್ಬಕೊಡುವ ಹೊಡಾಟ
ಗೆಜ್ಜೆ ಗೆಜ್ಜೆ ಕಲರದಲ್ಲೇ ಮೈಮರೆತು ನೋಡುವು ಸಂಬ್ರಮ ಹೇಳಾತಿರಾದು
ಹೇಳುತ್ತಾಹೋದರೆ ಎಷ್ಟು ವರ್ಣಿಸಿದರು ಸಾಲದು ಎಂಬಂತೆ ಇತ್ತು ಅ ಚಿತ್ರಣ

No comments:

Post a Comment